Solar Fraud : ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಹಾಕಿಸ್ತೀವಿ ಎಂದು ಮಹಿಳೆಗೆ ವಂಚಿಸಿದ ವೃದ್ಧ!

Nov 26, 2021, 3:07 PM IST

ಚಿತ್ರದುರ್ಗ (ನ. 26): ಬರದ ನಾಡು ಎಂದೇ ಹೆಸರಾದ ಚಿತ್ರದುರ್ಗದಲ್ಲಿ (Chitradurga) ಮಳೆ, ಬೆಳೆ ಸರಿಯಾಗಿ ಇಲ್ಲದೇ ಅನ್ನದಾತರು (Farmers) ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಬಾರಿ ಅಕಾಲಿಕ ಮಳೆಯಿಂದ  (Untimely Rain) ಬೆಳೆಯೆಲ್ಲಾ ಕೊಚ್ಚಿ ಹೋಗಿ ಕಂಗಾಲಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ವಂಚಕರು ನಿಮ್ಮ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ( Solar Plant) ಹಾಕಿಸ್ತೀವಿ, ಅದರಿಂದ ನಿಮ್ಗೆ ಕೈ ತುಂಬಾ ಹಣ ಬರುತ್ತೆ ಅಂತ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಪಂಗನಾಮ ಹಾಕಿದ್ದಾರೆ. 

ಬೆಂಗಳೂರು ಮೂಲದ ಧೀರೇಂದ್ರ ಆಚಾರ್ಯ ಪಪ್ಪು ಎಂಬ ವೃದ್ಧ, ನಿಮ್ಮ ಖಾಲಿ ಜಮೀನಿನಲ್ಲಿ‌ ನಾವು ಸೋಲಾರ್ ಪ್ಲಾಂಟ್ ಹಾಕಿಸ್ತೀವಿ. ಇದರಿಂದ ನೀವು ಬೆಸ್ಕಾಂ ಇಲಾಖೆಯಿಂದ  ಲಕ್ಷಗಟ್ಟಲೆ ಕಮೀಷನ್ (Commission) ಪಡೆಯಬಹುದು. ಹಾಗೆಯೇ ಪ್ರತಿ ತಿಂಗಳು 60 ಲಕ್ಷ‌  ಬಾಡಿಗೆ ಸಹ ಗಳಿಸಬಹುದು ಅಂತ ಪೂರ್ಣಿಮ ಎಂಬ ಈ ಮಹಿಳೆಗೆ  ದುಡ್ಡಿನ ಆಸೆ ತೋರಿಸಿ ನಂಬಿಸಿದ್ದಾನೆ. ಅಲ್ಲದೇ ಸರ್ಕಾರದ ಆದೇಶದಂತೆ ನಕಲಿ ದಾಖಲೆಗಳನ್ನು ತೋರಿಸಿದ್ದೂ, ಕೋಟಿಗಟ್ಟಲೇ ಟೆಂಡರ್ ಹಾಕಿದ್ದೇವೆ ಅಂತ ಕಥೆ ಹೇಳಿ, 20 ಲಕ್ಷ ಹಣ ಪಡೆದಿರೋ ಆಸಾಮಿ  ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಹಣ ಕೊಟ್ಟು ಕಂಗಾಲಾಗಿರೋ‌ ಪೂರ್ಣಿಮಾ ನಮಗಾದ ಅನ್ಯಾಯ ಮತ್ಯಾರಿಗೂ ಆಗಬಾರದು ಅಂತ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ. ನ್ಯಾಯ ಒದಗಿಸುವಂತೆ ಅಂಗಲಾಚಿದ್ದಾರೆ.