ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ

Jan 6, 2025, 9:55 PM IST

ಬೆಂಗಳೂರು (ಜ.06): ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ನಾಗಿಣಿ ಖ್ಯಾತಿನ ನಟಿ ಐಶ್ವರ್ಯಾ ಸಿಂಧೋಗಿ ಅವರು ಕೂಡ ಭಾಗವಹಿಸಿದ್ದರು. 

6 ರಿಂದ 12 ವರ್ಷದೊಳಗಿನ ಮಕ್ಕಳ ಏಕಾಗ್ರತೆ, ಗ್ರಹಿಕಾ ಮಟ್ಟ, ವಿಶುವಲ್​​ ಮೆಮೊರಿ ಹಾಗೂ ಜ್ಞಾಪಕ ಶಕ್ತಿ  ಹೆಚ್ಚಿಸುವ ಸಲುವಾಗಿ ಸುವರ್ಣನ್ಯೂಸ್​ - ಕನ್ನಡಪ್ರಭ ಜತೆಗೆ ​  ಎಸ್​ಐಪಿ ಅಬಾಕಸ್ ವತಿಯಿಂದ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧಾ​ ಕಾರ್ಯಕ್ರಮ ನಡೆಸಲಾಯಿತು. ಬೆಂಗಳೂರು ಆರಮನೆ ಮೈದಾನದ ಜಯಮಹಲ್​ ಪ್ಯಾಲೇಸ್‌ನಲ್ಲಿ ಈ ವಿಶೇಷ ಕಾಯ್ರಕ್ರಮ ಹಮ್ಮಿಕೊಳ್ಳಲಾಗಿತ್ತು. 
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಟಿ, ಬಿಗ್​ ಬಾಸ್​ ಸ್ಪರ್ಧಿ  ಐಶ್ವರ್ಯ ಸಿಂಧೋಗಿ, ನಟಿ ವಿಜಯಲಕ್ಷ್ಮೀ ಸೇರಿ ಹಲವರು ಭಾಗವಹಿಸಿದ್ದರು. ಎಸ್​ಐಪಿ ಅಬಾಕಸ್​ ಸಂಸ್ಥೆ ಚೇರ್​ಮನ್​ ಸಿಬಿ ಶೇಖರ್​ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧಾ​ ಕಾರ್ಯಕ್ರಮ ಮಕ್ಕಳ ಮನೋ ವಿಕಾಸಕ್ಕೆ ಸಹಕಾರಿಯಾಗಲಿಒದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.