ಹಕ್ಕಿ ಕಿರಿಕ್‌ಗೆ ಜನ ಹೈರಾಣು: ಹಾವಿನ ದ್ವೇಷ 12 ವರುಷ, ಕಾಗೆ ದ್ವೇಷ ಎಷ್ಟು ವರುಷ..?

Jan 30, 2022, 11:55 AM IST

ಚಿತ್ರದುರ್ಗ(ಜ.30):  ಕಾಗೆಯೊಂದು ಜನರು ಓಡಾಡೋದಕ್ಕೂ ಬಿಡದೇ ಸಿಕ್ಕ ಸಿಕ್ಕವರ ಮೇಲೆ ಅಟ್ಯಾಕ್ ಮಾಡುತ್ತಿರುವ ಘಟನೆ ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ನಡೆದಿದೆ.  ಇದ್ರಿಂದ ಬೇಸತ್ತ ಜನರು ಅಯ್ಯೋ‌ ಇದೇನಪ್ಪ ಕಾಗೆ ಕುಕ್ಕಿ ಹೋಯ್ತು ಎಂಬ ಭಯದಿಂದ ಪಾವಗಡದ ಶನೇಶ್ವರ ದೇವರ ಮೊರೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದೂ ಆಯ್ತು. ಹೀಗೆ ನಿತ್ಯ ಹತ್ತಾರು ಮಂದಿಗೆ ಕುಕ್ಕಲು ಶುರುಮಾಡಿದ ಕಾಗೆಯ ಅವಾಂತರ ನೋಡಿ ಜನರೇ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಯಿತು. 

ಇನ್ನೂ ಈ ಕಾಗೆಯು ಜನರಿಗೆ ಮಾತ್ರವಲ್ಲದೇ ಮನೆಯ ಕಿಟಕಿಯ ಗಾಜಿನ ಬಳಿ ಬಂದು ನಿತ್ಯ ಕುಕ್ಕಲಾರಂಭಿಸಿದೆ. ಇದ್ರಿಂದ ಆಶ್ಚರ್ಯಗೊಂಡ ಜನರು ಯಾಕಿಂಗೆ ಆಗ್ತಿರಬಹುದು ಎಂದು ಚಿಂತೆಗೆ ಒಳಗಾಗಿದ್ದಾರೆ.‌ ಆದ್ರೆ ಕಳೆದ 25 ವರ್ಷಗಳ ಹಿಂದೆ ಗ್ರಾಮದಲ್ಲಿ ಇದ್ದ ಆಂಜನೇಯ ದೇವಾಲಯವನ್ನು ಕೆಡವಿ ಆಂಜನೇಯ ದೇವರನ್ನು ಇಂದು ಅನಾಥವಾಗಿ ರಸ್ತೆಯ ಬದಿಯಲ್ಲಿರುವ ಒಂದು ಪಾಳು ಬಿದ್ದಿರೋ‌ ಜಾಗದಲ್ಲಿ ಇಟ್ಟಿರೋದೆ ಶಾಪವಾ ಎಂದು ಜನರು ಆಲೋಚಿಸಿದ್ದಾರೆ. ಆದ್ರೂ 25 ವರ್ಷಗಳಿಂದ ಇಲ್ಲದ ಯಾವುದೇ ಸಮಸ್ಯೆ ದಿಢೀರ್ ಅಂತ ಆರು ತಿಂಗಳಿಂದ‌ ಕಾಗೆ ಕಾಟ ಕೊಡಲು ಶುರುಮಾಡಿದ್ಯಲ್ಲ ಎಂದೂ ಯೋಚಿಸಿದ್ದಾರೆ. 

Karwar: ಸೀಬರ್ಡ್ ನೌಕಾನೆಲೆಗೆ ಭೂಮಿಕೊಟ್ಟ ಹಾಲಕ್ಕಿ ಒಕ್ಕಲಿಗರಿಗಿಲ್ಲ ಉದ್ಯೋಗ..!

ಒಟ್ಟಾರೆಯಾಗಿ ಕಾಗೆಯ ಕಾಟಕ್ಕೆ ಇಡೀ ಗ್ರಾಮದ ಜನರು ರೋಸಿ ಹೋಗಿದ್ದು. ಕೂಡಲೇ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಬೇಗ ಆಗಿ ಕಾಗೆಯ ಕಾಟ ತಪ್ಪಲಿ ಎಂಬುದು ಗ್ರಾಮಸ್ಥರ ಆಶಯ.