Jan 17, 2020, 5:13 PM IST
ಶಿವಮೊಗ್ಗ (ಜ. 17): ಶಿವಮೊಗ್ಗ ಜಿಲ್ಲೆಯ ಚೊರಡಿ ಅರಣ್ಯ ವಲಯದ ಉದನೂರು ಗ್ರಾಮದಲ್ಲಿ ಬಸವರಾಜ್ ಎಂಬುವರ ಮೇಲೆ ಅರಣ್ಯ ಅಧಿಕಾರಿಗಳು ದರ್ಪ ತೋರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಮಲೆನಾಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ಬಸವರಾಜ್ ಫಾರೆಸ್ಟ್ ಭೂಮಿಯಲ್ಲಿ ನಾಲ್ಕು ಮರಗಳನ್ನು ಕಡಿದಿದ್ದು, ಪ್ರಕರಣ ಕೂಡ ದಾಖಲಾಗಿದೆ. ತನಿಖೆಗೆ ಬಂದಿದ್ದ ಡಿಆರ್ ಎಫ್ ಓ ಗಿರೀಶ್ ಹಾಗೂ ಬಸವರಾಜ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ | ತೀವ್ರವಾಗಿ ಹರಡುತ್ತಿದೆ ಮಂಗನ ಕಾಯಿಲೆ ಸೋಂಕು...
ಅವಾಚ್ಯ ಶಬ್ದಗಳನ್ನು ಬಳಸಿ ಬಸವರಾಜ್ ಅರಣ್ಯ ಇಲಾಖೆಯ ಅಧಿಕಾರಿಯನ್ನು ಹೀಯಾಳಿಸಿ ಕೂಗಾಡಿದ್ದಾನೆ. ಈ ವೇಳೆ ಸಿಟ್ಟಿಗೆದ್ಗ ಗಿರೀಶ್ ಅಂಗಳದಲ್ಲಿ ನಿಂತಿದ್ದ ಮಹಿಳೆಯನ್ನು ತಳ್ಳಿ ಒಳಗೆ ನುಗ್ಗಿರುವ ದೃಶ್ಯ ವಿಡಿಯೋದಲ್ಲಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ