Jul 15, 2020, 7:21 PM IST
ಶಿವಮೊಗ್ಗ(ಜು.15):ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಪಾಪಿಗಳು ವಯಸ್ಸಾದ ವೃದ್ದೆಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ ಮಲ್ಲಿಗೇನ ಹಳ್ಳಿಯಲ್ಲಿ ನಡೆದಿದೆ.
ಭಿಕ್ಷೆ ಬೇಡಿ ತಿನ್ನುತ್ತಿದ್ದ ವೃದ್ದೆಯ ಪಾಲಿಗೆ ಈಗ ಆಕಾಶವೇ ಹೊದಿಕೆಯಾಗಿದೆ. ಶಿವಮೊಗ್ಗದ ಕೋಟೆ ರಸ್ತೆಯ ಆಂಜನೇಯ ಸ್ವಾಮಿ ದೇವಾಲಯ ಬಳಿ ಬಿಕ್ಷೆ ಬೇಡುತ್ತಿದ್ದ ವೃದ್ದೆ ಈಗ ಬಿಸಿಲು, ಮಳೆಗೆ ಮೈಯೊಡ್ಡಿದ್ದಾಳೆ.
ಬೆಂಗ್ಳೂರು ಲಾಕ್‌ಡೌನ್: ಫೀಲ್ಡಿಗಿಳಿದ ಸಚಿವ ಭೈರತಿ ಬಸವರಾಜ್
ಮಹಾನಗರ ಪಾಲಿಕೆ ಸಿಬ್ಬಂದಿ ಆಂಬ್ಯುಲೆನ್ಸ್‌ನಲ್ಲಿ ಕರೆತಂದು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ. ಪಾಲಿಕೆ ಸಿಬ್ಬಂದಿಗಳ ಈ ಅಮಾನವೀಯ ಕೃತ್ಯಕ್ಕೆ ಸ್ಥಳೀಯ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಮ್ಮೆ ಶಿವಮೊಗ್ಗ, ಮತ್ತೊಮ್ಮೆ ಬೆಂಗಳೂರು ಪಕ್ಕ ತನ್ನೂರು ಎನ್ನುವ ವೃದ್ಧೆ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಾಳೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.