ಚಿಕ್ಕಮಗಳೂರು: ಚುನಾವಣಾ ಹೊತ್ತಲ್ಲಿ ಮತ್ತೆ ಮುನ್ನೆಲೆಗೆ ಬಂದ ಧರ್ಮ ದಂಗಲ್

Mar 16, 2023, 1:52 PM IST

ಚಿಕ್ಕಮಗಳೂರು(ಮಾ.16): ಚುನಾವಣಾ ಹೊತ್ತಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ "ಧರ್ಮ ದಂಗಲ್" ಮತ್ತೆ ಮುನ್ನೆಲೆಗೆ ಬಂದಿದೆ.  ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರ‌ ಸ್ವಾಮಿ ಜಾತ್ರೆಯಲ್ಲಿ ಅನ್ಯ ಧರ್ಮಿಯರಿಗೆ ಅವಕಾಶ‌ ನೀಡದಂತೆ ಜಾಗೃತ ಹಿಂದೂ ಭಾಂದವರ ಹೆಸರಿನಲ್ಲಿ ತಹಶೀಲ್ದಾರ್‌ ಅವರಿಗೆ ಮನವಿ ಮಾಡಲಾಗಿದೆ. 

ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿ ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದೆ.  ಕಿಗ್ಗಾದಲ್ಲಿ ಇದೇ ತಿಂಗಳ 19ರಂದು ನಡೆಯುವ ಜಾತ್ರಾ ಮಹೋತ್ಸವ ನಡೆಯಲಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಬಂದ್ ಮಾಡಿ ಕಾನೂನಿಗೆ ಅಗೌರವ ತೋರಿದ್ದರು. ವ್ಯಾಪಾರದ ಲಾಭವನ್ನ ದೇಶ ವಿರೋಧಿ ಚಟುವಟಿಕೆಗೆ ಬಳಸುತ್ತಾರೆಂಬ ಸಂದೇಹವಿದೆ. ದೇವಸ್ಥಾನ ಮತ್ತು ಗ್ರಾಮದ ಸೂಕ್ಷ್ಮ ವಿಚಾರಗಳನ್ನ ಸಂಗ್ರಹಿಸುತ್ತಾರೆ. ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ. 

ಮೋದಿ ರೋಡ್ ಶೋ‌ಗೆ ಟಕ್ಕರ್ ಕೊಡಲು ದೇವೇಗೌಡರ ಮಹಾಯಾತ್ರೆ! 100 ಕಿ.ಮೀ ಯಾತ್ರೆ ಹಿಂದೆ ನೂರಾರು ಲೆಕ್ಕಾಚಾರ!

ಋಷ್ಯಶೃಂಗ ದೇವಸ್ಥಾನ ಮುಜರಾಯಿ ಇಲಾಖೆಯ ಅಧೀನದಲ್ಲಿದೆ.  ಋಷ್ಯಶೃಂಗೇಶ್ವರ ದೇವಸ್ಥಾನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೆಚ್ಚಿನ ದೈವವಾಗಿದೆ. ಅತಿವೃಷ್ಟಿ-ಅನಾವೃಷ್ಠಿ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ಪೂಜೆ ಮಾಡಿಸುತ್ತದೆ.