Aug 27, 2022, 1:56 PM IST
ಬೆಂಗಳೂರು (ಆ. 27): ಕುಂಬಳಗೋಡು ಸಮೀಪ ಚರಂಡಿ ಒಡೆದ ಹಿನ್ನಲೆ ಮೈಸೂರು ಬೆಂಗಳೂರು ಹೈವೇನಲ್ಲಿ (Bengaluru Mysuru Highway) ಟ್ರಾಫಿಕ್ ಜಾಮ್ ಉಂಟಾಗಿದೆ. ಕೆರೆ ಕೋಡಿ ಒಡೆದು ಬೆಂಗಳೂರು-ಮೈಸೂರು ಹೈವೆ ಮಾರ್ಗದಲ್ಲಿರುವ ಹೋಗಿರುವ ಚರಂಡಿ ಕೊಚ್ಚಿ ಹೋಗಿದೆ. ಹೀಗಾಗಿ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ 5ಕಿಮೀ ನಷ್ಟು ದೂರದವರೆಗೆ ವಾಹನ ನಿಂತಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ನೀರು ನಿಂತ ಜಾಗದಲ್ಲಿ ವಾಹನಗಳು ಮಂದಗತಿಯಲ್ಲಿ ಓಡಾಟ ನಡೆಸುತ್ತಿವೆ. ಹೀಗಾಗಿ ಟ್ರಾಫಿಕ್ನಲ್ಲಿ ಸಿಲುಕಿ ಜನರು ಪರದಾಡುತ್ತಿದ್ದಾರೆ.