ಡೋಂಟ್‌ ಕೇರ್..! ಕೊರೊನಾ ನಡುವೆಯೂ ಕರಿಯಪ್ಪ ‌ತಾತಾನ ಜಾತ್ರೆ!

Aug 18, 2020, 11:45 AM IST

ಬೆಂಗಳೂರು (ಆ. 18):  ಭಕ್ತಿ, ಸಂಪ್ರದಾಯ, ಜಾತ್ರೆ ಅಂತ ಬಂದರೆ ನಮ್ಮ ಜನ ಯಾವುದಕ್ಕೂ ಕೇರ್ ಮಾಡುವುದಿಲ್ಲ. ಇದಕ್ಕೆ ಸಾಕ್ಷಿ ರಾಯಚೂರು ತಾಲೂಕಿನ ಕಲ್ಮಲ ಗ್ರಾಮದ ಕರಿಯಪ್ಪ ತಾತನ ಜಾತ್ರೆ. 

ಕಲ್ಮಲದ ಕರಿಯಪ್ಪ ತಾತನ ದೇವಾಲಯಕ್ಕೆ ಕೊರೊನಾ ಸೋಂಕು ಹರಡುವಿಕೆ ಭೀತಿಯನ್ನೂ ಮರೆತು ಸಾವಿರಾರು ಭಕ್ತರು ಆಗಮಿಸಿದ್ರು.  ದೇವಾಲಯಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ದೇವಾಲಯದ ಹೊರಗಡೆ ಸಿಕ್ಕಸಿಕ್ಕಲ್ಲೆ ತೆಂಗಿನಕಾಯಿ ಹೊಡೆದು ಕೈ ಮುಗಿದು ಭಕ್ತರು ವಾಪಸ್ ಹೋಗುವುದು ಕಲ್ಮಲ ಗ್ರಾಮದಲ್ಲಿ ಕಂಡು ಬಂತು. 

ಇನ್ನೂ ದೇವಾಲಯ ಬಳಿ ತೆಂಗಿನಕಾಯಿ ಮಾರಾಟಕ್ಕೆ ಅವಕಾಶ ನೀಡದ ಹಿನ್ನೆಲೆ ಕಲ್ಮಲದಿಂದ ರಾಯಚೂರು ಮಾರ್ಗದಲ್ಲಿ ಸುಮಾರು ಎರಡು ಕಿ.ಮೀವರೆಗೆ ರಸ್ತೆ ಪಕ್ಕ ಕುಳಿತು ನೂರಾರು ವ್ಯಾಪಾರಿಗಳು ತೆಂಗಿನಕಾಯಿ ಮಾರಾಟ ಮಾಡಿದ್ರು. ಇನ್ನೂ ದೇವಾಲಯ ಬಳಿ ಭಕ್ತರು ಗುಂಪು-ಗುಂಪಾಗಿ ಸೇರುತ್ತಿದ್ದು, ಸಾಮಾಜಿಕ ಅಂತರವನ್ನ ಮರೆತಿದ್ದರು.  

 ಪ್ರತೀ ವರ್ಷ ಕರಿಯಪ್ಪ ತಾತಾನ ಜಾತ್ರೆ ಅದ್ದೂರಿಯಿಂದ ನಡೆಯುತ್ತಿತ್ತು. ಒಂದು ತಿಂಗಳ ಕಾಲ ನಡೆಯುವ ಜಾತ್ರೆಯ ಮಹಾ ರಥೋತ್ಸವ ವೇಳೆ ಲಕ್ಷಾಂತರ ಜನ ಭಕ್ತರು ಭಾಗಿಯಾಗುತ್ತಿದ್ದರು. ಆದ್ರೆ ಈ ವರ್ಷ ಕೊರೊನಾ ಭೀತಿ ಸಂಭ್ರಮಕ್ಕೆ ತೆರೆ ಎಳೆದಿದೆ. ಜಿಲ್ಲಾಡಳಿತ ಜನ ಸೇರುವುದನ್ನ ನಿಷೇಧಿಸಿದ್ದರೂ ಭಕ್ತರ ದಂಡು ದೇವಾಲಯದ ಕಡೆ ಹರಿದು ಬಂದಿದೆ.