Raichur: ಸಾಲಬಾಧೆಯಿಂದ ಪತಿ ಆತ್ಮಹತ್ಯೆ, ಪರಿಹಾರಕ್ಕಾಗಿ ಇಳಿವಯಸ್ಸಿನಲ್ಲಿ ಪತ್ನಿಯ ಪರದಾಟ

Dec 22, 2021, 5:36 PM IST

ರಾಯಚೂರು (ಡಿ. 22): ರೈತ ಆತ್ಮಹತ್ಯೆ ‌ಮಾಡಿಕೊಂಡು 1 ವರ್ಷ 8 ತಿಂಗಳು ಕಳೆದರೂ ಇನ್ನೂ ಪರಿಹಾರ ಬಂದಿಲ್ಲ.  ಜಿಲ್ಲೆಯ ‌ಲಿಂಗಸೂಗೂರು (Lingasuguru) ತಾ. ತೋರಲಬೆಂಚಿ ಗ್ರಾಮದ ರೈತನ ಕುಟುಂಬದ ಗೋಳು ಕೇಳುವವರಿಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ 

ಜಮೀನಿನಲ್ಲಿ ಬಾವಿ ತೊಡಿಸಲು ರೈತ ತಿಪ್ಪಣ್ಣ 5 ಲಕ್ಷ ಸಾಲ ಮಾಡಿಕೊಂಡಿದ್ದರು.  ಬಾವಿಯಲ್ಲಿ ನೀರು ಬಾರದೇ,  ಸಾಲ ತೀರಿಸಲು ಆಗದೇ ಮನನೊಂದು ತಿಪ್ಪಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಪರಿಹಾರಕ್ಕಾಗಿ 
ರೈತನ ಪತ್ನಿ ದೇವಮ್ಮ‌ ಒಂದು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದು, ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ. 

ಇನ್ನು ತಿಪ್ಪಣ್ಣನ ಪತ್ನಿ ವಾಸವಿದ್ದ ಮನೆ ಕಳೆದ ತಿಂಗಳು‌ ಮಳೆಯಿಂದ ಬಿದ್ದಿದೆ.  ಮನೆಬಿದ್ದ ಬಗ್ಗೆ ‌ವಿಎ ಮತ್ತು ಆರ್ ಐಗೆ ಹೇಳಿದ್ರೂ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿಲ್ಲ. ದೇವಮ್ಮಗೆ ವಿಧವಾ ವೇತನವೂ ಇಲ್ಲ, ವೃದ್ಧಾಪ್ಯದ ವೇತನವೂ ಇಲ್ಲದೆ ಪರದಾಡುತ್ತಿದ್ದಾರೆ.