ದೇಶದ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ಟೀ ಪುಡಿ, ಕೊಬ್ಬರಿ ಎಣ್ಣೆ, ವಾಷಿಂಗ್ ಪೌಡರ್ ಮಾರಾಟ!

Jun 19, 2022, 5:09 PM IST

ರಾಯಚೂರು (ಜೂ. 19):  ದಿನ ಬಳಕೆ ಸಾಮಗ್ರಿಗಳ ಅಸಲಿ ಕಂಪನಿಗಳ ಚಿಹ್ನೆಗಳನ್ನು ಬಳಸಿಕೊಂಡು ನಕಲಿ ವಸ್ತುಗಳನ್ನಾಗಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 16 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ದಿ ಪಾರ್ಕ್ ಹೊಟೇಲ್ ರೇವ್ ಪಾರ್ಟಿ ಪ್ರಕರಣ: ಪಾರ್ಟಿಗೆ ಡ್ರಗ್ಸ್ ಬಂದಿದ್ಹೇಗೆ.?

ಜಿಲ್ಲೆಯ ಸಿರವಾರ ತಾಲೂಕಿನ ಬಾಲಾಜಿ ಕ್ಯಾಂಪಿನ ವಸತಿ ಶಾಲೆಯ ಕೊಠಡಿಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ಅಡುಗೆಗೆ ಸಂಬಂಧಿಸಿದ ವಿವಿಧ ಪದಾರ್ಥಗಳ ಅಸಲಿ ಕಂಪನಿಗಳ ಚಿಹ್ನೆಗಳನ್ನು ಬಳಸಿಕೊಂಡು ವಸ್ತುಗಳನ್ನು ಪ್ಯಾಕ್‌ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಶೋಧಿಸಿ ರತನ್‌ಸಿಂಗ್‌ ಸೇರಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅದರ ಜೊತೆಗೆ ನಕಲು ಮಾಡುವುದಕ್ಕಾಗಿ ಬಳಸುತ್ತಿದ್ದ ಯಂತ್ರೋಪಕರಣಗಳು, ಕಚ್ಚಾ ಸಾಮಗ್ರಿಗಳು, ವಾಹನ ಸೇರಿದಂತೆ 16 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ.  ಈ ಜಾಲವು ಪ್ರಮುಖವಾಗಿ ಕೊಬ್ಬರಿ ಎಣ್ಣೆ, ಚಹಾ ಪುಡಿ, ಸಾಬೂನು ಪೌಡರ್‌, ತಿಂಡಿಯ ಮೂಲ ಅಸಲಿ ಕಂಪನಿಗಳ ಚಿಹ್ನೆ, ಪ್ಯಾಕೇಟ್‌, ಡಬ್ಬುಗಳನ್ನು ನಕಲಿಗೊಳಿಸಿ ಮಾರಾಟ ಮಾಡುತ್ತಿದ್ದರು.