Bagalkot: ತೋಟಗಾರಿಕೆ ಮೇಳದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ, ಅಪ್ಪುವಿಗೂ ವಿಶೇಷ ನಮನ

Bagalkot: ತೋಟಗಾರಿಕೆ ಮೇಳದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ, ಅಪ್ಪುವಿಗೂ ವಿಶೇಷ ನಮನ

Published : Jan 01, 2022, 11:18 AM ISTUpdated : Jan 01, 2022, 12:22 PM IST

- ತೋಟಗಾರಿಕೆ ಮೇಳದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

- ಅಪ್ಪು ನಗುವಿನ ರಂಗೋಲಿ ಚಿತ್ರಕ್ಕೆ ಫುಲ್ ಫಿದಾ ಆದ ಜನತೆ

- ಪುಷ್ಪಮೇಳದಲ್ಲಿ ಹೂಗಳ ಅಂದ ಕಂಡು ಮನಸೋತ ನೀರೆಯರು

- ಮೇಳದಲ್ಲಿ ನಾನಾ ತರಹದ ಹಣ್ಣು ತರಕಾರಿಗಳ ಪ್ರದರ್ಶನ

ಬಾಗಲಕೋಟೆ (ಜ. 01): ಅಲ್ಲಿ ಕಾಲಿಟ್ಟರೆ ಸಾಕು ಹೂಗಳ (Flowers World) ಅದ್ಬುತ ಲೋಕವೇ ತೆರೆದಿತ್ತು. ಹಚ್ಚಹಸಿರಿನ ಹಣ್ಣುಗಳ ಸಾಲು ಕಣ್ಮನ ಸೆಳೆದಿತ್ತು. ಸುಂದರ ಮನಸೂರೆಗೊಳ್ಳುವ ಹೂಗಳ ಮಧ್ಯೆ ಅಪ್ಪು ಪುನೀತ ಅವರ ಕಿಲ ಕಿಲ‌ನಗು ಅರಳಿತ್ತು. ನೋಡಿದರೆ ನೋಡುತ್ತಾ ನಿಲ್ಲಬೇಕೆಂಬ ಸೌಂದರ್ಯದ ಸೊಬಗು ಅಲ್ಲಿ ಮೈದಳೆದಿತ್ತು. ಹೂ ಮನಸ್ಸಿನ ಅಪ್ಪು ರಂಗೋಲಿ ಕಲಾಕೃತಿ ಎಲ್ಲರ ಆಕರ್ಷಣಾ ಕೇಂದ್ರ ಬಿಂದುವಾಗಿತ್ತು. ಇಂತಹ ಸೊಬಗಿನ ಕಲರ್ ಕಲರ್ ಹೂಗಳು ಕಂಡು ಬಂದಿದ್ದು ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ (Bagalkot Flower Show)

ಫಲಪುಷ್ಟ ಪ್ರದರ್ಶನದಲ್ಲಿ ಆಕರ್ಷಣೀಯ ಕೇಂದ್ರ ಬಿಂದು ಆಗಿದ್ದು ಇತ್ತೀಚೆಗೆ ನಮ್ಮನ್ನಗಲಿದ ಪವರ್ ಸ್ಟಾರ್‌ (Puneeth Rajkumar) ಸುತ್ತಲೂ ಅಂದವಾದ ಹೂಗಳ ಮಧ್ಯೆ ಪವರ್ ಸ್ಟಾರ್ ನಗುಮುಖದ, ಹೆಗಲ ಮೇಲೆ‌ ಪಾರಿವಾಳ ಕೂತ ಭಾವಚಿತ್ರ ಬಿಡಿಸಲಾಗಿತ್ತು. ಪುನೀತ್ (Puneeth Rajkumar) ಭಾವಚಿತ್ರವನ್ನು ಹುಬ್ಬಳ್ಳಿ (Hubballi) ಮೂಲದ ಕಲಾವಿದ ರಂಗೋಲಿಯಲ್ಲಿ ಬಿಡಿಸಿದ್ದು ಎಲ್ಲರನ್ನು ಆಕರ್ಷಿಸುತ್ತಿತ್ತು. ನಾನು ಒಬ್ಬ ಪುನೀತ್ ಅಭಿಮಾನಿ ನನಗೆ ಪುನೀತ್ ಭಾವಚಿತ್ರ ರಂಗೋಲಿಯಲ್ಲೇ ಬಿಡಿಸೋದಕ್ಕೆ ಆಹ್ವಾನ ನೀಡಲಾಗಿತ್ತು. ಜನರು ಇದನ್ನು ನೋಡಿ ಬಹಳ ಖುಷಿ ಪಡುತ್ತಿದ್ದಾರೆ.ಪುನೀತ್ ಚಿತ್ರಕ್ಕಾಗಿ ನನಗೆ ಆಹ್ವಾನ ನೀಡಿದ್ದು ಹೆಮ್ಮೆ ಅಂದ್ರು ಕಲಾವಿದ ಶಿವಲಿಂಗಪ್ಪ. 
                            
ಕೋವಿಡ್ ಹಿನ್ನೆಲೆ ಈ ವರ್ಷವೂ ಆನ್‌ಲೈನ್‌ಗೆ ಹೆಚ್ಚು ಆದ್ಯತೆ ಕೊಡಲಾಗಿದ್ದು ,ಮೇಳದಲ್ಲಿ ಯಾವುದೇ ಮಳಿಗೆ ತೆರೆಯೋದಕ್ಕೆ ಅವಕಾಶವಿರಲಿಲ್ಲ. ರೈತರಿಗೆ ಸಾಮಾಜಿಕ ಜಾಲತಾಣದ ಮೂಲಕ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗಿದೆ. ಇನ್ನು ಯಾವುದೇ ಮಳಿಗೆಗೆ ಅವಕಾಶ ನೀಡದಿದ್ದರೂ ಫಲಪುಷ್ಪ ಪ್ರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ವಿವಿ ಸಹಯೋದಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಕಲರ್ ಪುಲ್ ರಂಗು ರಂಗಿನ ಹೂಗಳು ನೋಡುಗರನ್ನು ಆಕರ್ಷಿಸಿದವು. ಮಹಿಳೆಯರು ಯುವತಿಯರು ಹೂಗಳ ಅಂದ ನೋಡಿ ಸಂಭ್ರಮಪಟ್ಟರು. ಹೂಗಳ ಮುಂದೆ, ಪುನೀತ್ ಭಾವಚಿತ್ರದ ಮುಂದೆ ನಿಂತು  ಸೆಲ್ಫಿ ತೆಗೆದುಕೊಂಡ್ರು.  ಜೊತೆಗೆ ಪಪ್ಪಾಯಿ, ಪೇರು,ಚಿಕ್ಕು,ಹಣ್ಣುಗಳು , ವಿವಿಧ ತರಕಾರಿ ಬೆಳೆಗಳ ಪ್ರದರ್ಶನ ಎಲ್ಲವನ್ನು ನೋಡೋದಕ್ಕೆ ಜನರು ,ರೈತರು ಆಗಮಿಸಿದ್ದರು. ಕೇವಲ ನೋಡೋದಕ್ಕೆ ಮಾತ್ರ ಸೀಮಿತವಾಗದೆ ತೋಟಗಾರಿಕೆ ಬೆಳೆ ,ಹೂ ಕೃಷಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡು ಜನರು ಸಂಭ್ರಮಿಸಿದರು.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more