ನೆರೆ ಸಮಸ್ಯೆಯಲ್ಲಿ ಸಿಲುಕಿರುವ ಜನರಿಗೆ ನೆರವು ನೀಡಿ, ಸಹಾಯ ಮಾಡಬೇಕಾದ ಪೊಲೀಸರು ಸಖತ್ ಪೋಸ್ ನೀಡಿದ್ದಾರೆ. ಕಲಬುರ್ಗಿಯ ಕೂಡಲಗಿ ಗ್ರಾಮಸ್ಥರು ನೆರೆಯಿಂದ ಕಂಗಾಲಾಗಿದ್ದರು. ಅಲ್ಲಿಗೆ ಹೋದ PSI ಬಟ್ಟೆ ನೆನೆಯುತ್ತೆಂದು ತೆಪ್ಪದಲ್ಲಿ ನಿಂತಿದ್ದಾರೆ. ಕೊನೆಗೆ ಗ್ರಾಮಸ್ಥರೇ ತೆಪ್ಪವನ್ನು ತಳ್ಳಿಕೊಂಡು ಹೋಗಿದ್ದಾರೆ.
ಬೆಂಗಳೂರು (ಅ. 22): ನೆರೆ ಸಮಸ್ಯೆಯಲ್ಲಿ ಸಿಲುಕಿರುವ ಜನರಿಗೆ ನೆರವು ನೀಡಿ, ಸಹಾಯ ಮಾಡಬೇಕಾದ ಪೊಲೀಸರು ಸಖತ್ ಪೋಸ್ ನೀಡಿದ್ದಾರೆ. ಕಲಬುರ್ಗಿಯ ಕೂಡಲಗಿ ಗ್ರಾಮಸ್ಥರು ನೆರೆಯಿಂದ ಕಂಗಾಲಾಗಿದ್ದರು. ಅಲ್ಲಿಗೆ ಹೋದ PSI ಬಟ್ಟೆ ನೆನೆಯುತ್ತೆಂದು ತೆಪ್ಪದಲ್ಲಿ ನಿಂತಿದ್ದಾರೆ. ಕೊನೆಗೆ ಗ್ರಾಮಸ್ಥರೇ ತೆಪ್ಪವನ್ನು ತಳ್ಳಿಕೊಂಡು ಹೋಗಿದ್ದಾರೆ. ಇಷ್ಟೇ ಅಲ್ಲ, ಊರಿಗೆ ಬಂದು ಮೇಕೆ ಮರಿಗಾಗಿ ಹುಡುಕಾಟ ನಡೆಸಿದ್ದಾರೆ. ಮೇಕೆ ಮರಿಯನ್ನು ಹಿಡಿದುಕೊಂಡು ಮೇಕೆಯನ್ನು ರಕ್ಷಿಸಿದೆ ಎಂದು ಬಿಲ್ಡಪ್ ಕೊಟ್ಟಿದ್ದಾರೆ.