ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಉದ್ಯಾನ ನಗರಿ ಖ್ಯಾತಿಗೆ 'ಟರ್ಮಿನಲ್ 2' ಮತ್ತೊಂದು ಗರಿಯಾಗಿದ್ದು, ಇದು ಏಷ್ಯಾ ಖಂಡದ ಮೊದಲ ಗಾರ್ಡನ್ ಟರ್ಮಿನಲ್-2 ಆಗಿದೆ. ಇದರ ನಿರ್ಮಾಣಕ್ಕೆ ಸಾವಿರಾರು ಕೋಟಿ ವೆಚ್ಚ ಮಾಡಲಾಗಿದ್ದು, ಈ ಟರ್ಮಿನಲ್ ವರ್ಷಕ್ಕೆ ಐದಾರು ಕೋಟಿ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಹೊಂದಿದೆ. ಅಪ್ಪಟ ದೇಸಿ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದ್ದು, ಭೂಲೋಕ ಸ್ವರ್ಗ ಎಂಬಂತಿದೆ.