Seeds Price Rise : ಬಿತ್ತನೆ ಆಲೂಗಡ್ಡೆ ಬೆಲೆ ಗಗನಕ್ಕೆ - ರೈತರು ಕಂಗಾಲು

Dec 24, 2021, 3:53 PM IST

ಕೋಲಾರ(ಡಿ.24):  ಬಿತ್ತನೆ ಬೀಜದ ಆಲೂಗಡ್ಡೆ (Potato) ಬೆಲೆ ಗಗನಕ್ಕೇರಿದ್ದು, ರೈತರು (Farmers) ಕಂಗಾಲಾಗಿದ್ದಾರೆ.  ಜಿಲ್ಲೆಯಲ್ಲಿ ಸುರಿದ ಬಾರೀ ಮಳೆಯಿಂದ  ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿದ್ದ ಬೆಳೆಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಈಗಾಗಲೇ ನಷ್ಟದಲ್ಲಿರುವ ಜಿಲ್ಲೆಯ ರೈತರು ಸದ್ಯ ಹೊಸದಾಗಿ ಬೆಳೆಗಳನ್ನು ಬೆಳೆಯುವ ಬಗ್ಗೆ ಚಿಂತನೆ ನಡೆಸುವಷ್ಟರಲ್ಲೇ ರೈತರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಬಿತ್ತನೆ ಆಲೂಗಡ್ಡೆಯ ಬೆಲೆ ಗಗನಕ್ಕೇರಿದೆ. 

PepsiCo India: ವಿಶೇಷ ತಳಿ ಆಲೂಗಡ್ಡೆ ಮೇಲಿನ ಪೆಪ್ಸಿಕೋ ಹಕ್ಕುಸ್ವಾಮ್ಯ ರದ್ದು

 ಬಂಗಾರಪೇಟೆ ಎಪಿಎಂಸಿ ಸೇರಿದಂತೆ ಜಿಲ್ಲೆಯ ಹಲವು ಎಪಿಎಂಸಿಗಳಲ್ಲಿ(APMC)  ಮೊದಲು ಒಂದುವರೆ ಸಾವಿರ ಇದ್ದ ಬಿತ್ತನೆ ಆಲೂಗೆಡ್ಡೆ ಬೆಲೆ  ಐದು ಸಾವಿರಕ್ಕೇರಿದೆ. ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲು ಒಂದಷ್ಟು ಉತ್ತಮ ವಾತಾವರಣ ಇರುವ ಪರಿಣಾಮ, ಹಲವು ಜನ ರೈತರು ಆಲೂಗಡ್ಡೆ ಬಿತ್ತನೆ ಮಾಡಲು ಮುಂದಾಗಿದ್ದು, ಇತ್ತ ಬೆಲೆ ಕೈಗೆಟುಕದಂತಾಗಿದೆ.   ಆಲೂಗೆಡ್ಡೆ ವ್ಯಾಪಾರಿಗಳು ಹಾಗೂ ದಳ್ಳಾಳಿಗಳು ರೈತರ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಇದರಿಂದ  ಜಿಲ್ಲಾಡಳಿತ ಬಿತ್ತನೆ ಆಲೂಗಡ್ಡೆಗೆ ದರ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.