ಎರಡೇ ದಿನಕ್ಕೆ ಕಿತ್ತು ಹೋದ ಡಾಂಬರು ರಸ್ತೆ: ಸಚಿವ ಹಾಲಪ್ಪ ಆಚಾರ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ

Dec 2, 2022, 5:12 PM IST

ಕೊಪ್ಪಳ  ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಮಾಡಿರುವ ಡಾಂಬರು ರಸ್ತೆ ಇದೀಗ ಕಳಪೆ ಕಾಮಗಾರಿಯಿಂದಾಗಿ ಕಿತ್ಕೊಂಡ್ ಬರ್ತಿದೆ. ಕುದರಿಮೋತಿ ಗ್ರಾಮದಿಂದ ಚಂಡಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, 1 ಕೋಟಿ 20 ಲಕ್ಷ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಳಪೆ ಗುಣಮಟ್ಟದಿಂದ ರಸ್ತೆ ನಿರ್ಮಾಣ ಮಾಡಿದ್ದರ ಕಾರಣಕ್ಕಾಗಿ ಇದೀಗ ಇಡೀ ರಸ್ತೆ ಸಂಪೂರ್ಣವಾಗಿ ಕಿತ್ತು ಬರುತ್ತಿದ್ದು, ಸ್ವಲ್ಪ ಕೈ ಹಾಕಿ ಅಗೆದರೆ ಸಾಕು ಡಾಂಬರು ಕಿತ್ತುಕೊಂಡು ಬರುತ್ತಿದೆ. ಕುದರಿಮೋತಿ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಗ್ರಾಮವಾಗಿದೆ. ಈ ಕ್ಷೇತ್ರದ ಶಾಸಕರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರ್. ಈ ಕಳಪೆ ರಸ್ತೆಯನ್ನು ಮಾಡಿದ್ದು ಸ್ವತಃ ಅವರ ಸಂಬಂಧಿಕರಾದ ಬಾಪುಗೌಡ ಎನ್ನುವರು. ಇನ್ನು ಡಾಂಬರು ರಸ್ತೆ ಕಳಪೆ ಕಾಮಗಾರಿ ಆಗಿದೆ ಎಂದು ಗ್ರಾಮಸ್ಥರು ಹೇಳಿದರೆ ಗುತ್ತಿಗೆದಾರ ಬಾಪುಗೌಡ ನಾನು ಸಚಿವರ ಸಂಬಂಧಿಕನಾಗಿದ್ದು, ನನಗೆ ಯಾರು ಏನು ಮಾಡುತ್ತೀರಿ ಮಾಡಿಕೊಳ್ಳಿ ಎಂದು ಧಮ್ಕಿ ಹಾಕಿದ್ದಾನಂತೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಪೊಲೀಸರಿಂದ ಧಮ್ಕಿ ಸಹ ಹಾಕಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ, ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಪಟ್ಟ ಕೈತಪ್ಪುವ ಭೀತಿ!