ವಿಜಯಪುರದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ: ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ

Feb 6, 2023, 3:40 PM IST

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ, ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ಛಾಯಾಚಿತ್ರ, ವ್ಯಂಗ್ಯಚಿತ್ರ ಹಾಗೂ ವಸ್ತು ಪ್ರದರ್ಶನ ನಡೆಯುತ್ತಿದೆ. ಫೋಟೋ ಜರ್ನಲಿಸ್ಟ್‌ಗಳು ತೆಗೆದ ಪ್ರಶಸ್ತಿಗಳಿಗೆ ಆಯ್ಕೆಯಾದ ಪೋಟೋಗಳ ಪ್ರದರ್ಶನ ಇದಾಗಿದ್ದು, 100ಕ್ಕೂ ಅಧಿಕ ಆಯ್ದ ಛಾಯಾಚಿತ್ರಗಳು ಇವೆ. ಪ್ರವಾಹ ಸಂದರ್ಭದಲ್ಲಿ ದೇವರ ಫೋಟೋಗಳನ್ನು ಎತ್ತಿಕೊಂಡು ಬರುತ್ತಿರುವ ಸಂತ್ರಸ್ತನ ಫೋಟೊ ಗಮನ ಸೆಳೆಯಿತು. ಹಾಗೂ ಪತ್ರಕರ್ತರು, ಸಾರ್ವಜನಿಕರನ್ನು ವ್ಯಂಗ್ಯಚಿತ್ರಗಳು ನಗೆಗಡಲಲ್ಲಿ ತೇಲಿಸಿದವು. ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ, ಡಿಕೆಶಿ ಹಾಗೂ ನಟ ಯಶ್  ವ್ಯಂಗ್ಯಚಿತ್ರಗಳು ಇದ್ದವು.ವಿಜಯಪುರ ಜಿಲ್ಲೆ ಸಿಂದಗಿಯ ಶರಣು ಚಟ್ಟಿ ಬಿಡಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಯಿತು.