ಹಳ್ಳಿ ಅಡುಗೆ ತಿಂದು, ಇಳಕಲ್ ಸೀರೆಯಲ್ಲಿ ಸಖತ್‌ ಮಿಂಚಿದ ಹೆಣ್ಮಕ್ಳು!

Jan 23, 2020, 1:11 PM IST

ಬಾಗಲಕೋಟೆ(ಜ.23): ಹಳ್ಳಿಯ ಅಡುಗೆಯ ಜೊತೆಗೆ ಉಡುಗೆ ತೊಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿ ವಿಶಿಷ್ಟ, ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ನಡೆದಿದ್ದು ಜಿಲ್ಲೆಯ ಸಾವಳಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಚೆನ್ನಪ್ಪ ನಿಂಗಪ್ಪ ನಿರಾಣಿ ಸರಕಾರಿ ಕಾಲೇಜಿನಲ್ಲಿ. 

ಬಿ.ಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಂದ ಸಂಕ್ರಾಂತಿ ಸೊಗಡು ಜೊತೆಗೆ ನಮ್ಮ ಜನಪದ, ನಮ್ಮ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಎತ್ತಿನ ಬಂಡಿಯಲ್ಲಿ ಬಂದ್ರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆಯುಟ್ಟು ತಮ್ಮ ಮನೆಯಲ್ಲಿ ನಾನಾ ತರಹದ ಅಡಿಗೆಗಳನ್ನು ಮಾಡಿಕೊಂಡು ಕಾಲೇಜಿಗೆ ಆಗಮಿಸಿ ಗಮನ ಸೆಳೆದಿದ್ದಾರೆ.