Jul 17, 2019, 9:19 PM IST
ಬಾಗಲಕೋಟೆಯ ರೈಲ್ವೆ ನಿಲ್ದಾಣದಲ್ಲಿ ಕೂದಲಳತೆಯಲ್ಲೇ ವಯೋವೃದ್ಧರೊಬ್ಬರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಗೂಡ್ಸ್ ರೈಲು ಸಂಚರಿಸುವಾಗ ಆಕಸ್ಮಿಕವಾಗಿ ಹಳಿ ಮಧ್ಯೆ ಸಿಲುಕಿಕೊಂಡಿದ್ದರು. ಪಕ್ಕದಲ್ಲಿದ್ದ ಸ್ಥಳೀಯರು ‘ಹಳಿಯ ಮಧ್ಯೆ ಮಲಗು ಅಜ್ಜ’ ಎಂದು ಕೂಗಿ , ಧೈರ್ಯ ತುಂಬಿದರು. ಅಜ್ಜ ಸಹ ಹಾಗೆ ಮಾಡಿದ್ದು ಗೂಡ್ಸ್ ರೈಲು ಹಳಿ ಮೇಲೆ ಹರಿದುಹೋಗುತ್ತಿದ್ದರೆ ತಾತಪ್ಪ ಮಧ್ಯದಲ್ಲಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.