Koppal: 300 ವಿದ್ಯಾರ್ಥಿಗಳು, ಇರುವುದು 3 ತರಗತಿಗಳು ಮಾತ್ರ, ಸರ್ಕಾರಿ ಮಾದರಿ ಶಾಲೆಯ ದುಸ್ಥಿತಿ!

Koppal: 300 ವಿದ್ಯಾರ್ಥಿಗಳು, ಇರುವುದು 3 ತರಗತಿಗಳು ಮಾತ್ರ, ಸರ್ಕಾರಿ ಮಾದರಿ ಶಾಲೆಯ ದುಸ್ಥಿತಿ!

Published : Nov 23, 2021, 05:34 PM IST

- 2016ರಲ್ಲಿ ಆರಂಭವಾಗಿರುವ ಮೌಲಾನಾ‌ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ 

- 300 ವಿದ್ಯಾರ್ಥಿಗಳಿಗೆ ಇಲ್ಲಿ ಇರುವುದು ಕೇವಲ ಮೂರೇ ಮೂರು ತರಗತಿಗಳು ಮಾತ್ರ!

- 60 ಲಕ್ಷ ಅನುದಾನ ಬಿಡುಗಡೆಯಾಗಿದ್ರೂ, ಅಧಿಕಾರಿಗಳಿಂದ ಜಾಗದ ಕೊರತೆಯ ನೆಪ

- ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ 

ಕೊಪ್ಪಳ (ನ. 23): ಸರಕಾರ ಅಲ್ಪಸಂಖ್ಯಾತರ (Minority) ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ 2016 ರಲ್ಲಿ ಮೌಲಾನಾ ಅಜಾದ್ ( Moulana Azad) ಮಾದರಿ ಆಂಗ್ಲ ಮಾದ್ಯಮ ಶಾಲೆಯನ್ನು ಆರಂಭ ಮಾಡಿದೆ. ಈ ಶಾಲೆಯಲ್ಲಿ 6 ರಿಂದ 10 ನೇ ತರಗತಿವರೆಗೆ ಒಟ್ಟು 300 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 

ಆದರೆ 300 ವಿದ್ಯಾರ್ಥಿಗಳಿಗೆ ಇಲ್ಲಿ ಇರುವುದು ಕೇವಲ ಮೂರೇ ಮೂರು ತರಗತಿಗಳು ಮಾತ್ರ. ಇದರಿಂದಾಗಿ ಒಂದು ತರಗತಿಯಲ್ಲಿ ಎರಡೆರಡು ತರಗತಿಗಳನ್ನು ನಡೆಸಲಾಗುತ್ತಿದ್ದು, ಇನ್ನುಳಿದ ಕೆಲ ತರಗತಿಗಳಲ್ಲಿ ವಿದ್ಯಾರ್ಥಿಗಳು ಹೊರಗಡೆ ಕುಳಿತು ಪಾಠ ಕೇಳಬಹುದಾದ ಅನಿವಾರ್ಯತೆ ಉಂಟಾಗಿದೆ. ಇನ್ನು ವಿದ್ಯಾರ್ಥಿಗಳು ತರಗತಿಯ ಹೊರಗಡೆ ಕುಳಿತು ಪಾಠ ಕೇಳುವುದರಿಂದ‌ ಅವರಿಗೆ ಶಿಕ್ಷಕರು ಹೇಳುವ ಪಾಠ ಸರಿಯಾಗಿ ಅರ್ಥ ಆಗದಂತಾಗುತ್ತದೆ. ಜೊತೆಗೆ ಪಕ್ಕದಲ್ಲೇ ಪದವಿ ಕಾಲೇಜು ಇರುವುದರಿಂದ ಆ ಕಾಲೇಜಿನ ಗದ್ದಲಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಡುವ ಪಾಠ ಸರಿಯಾಗಿ ಕೇಳಿಸುವುದೇ ಇಲ್ಲ.  ಇದರಿಂದಾಗಿ ವಿದ್ಯಾರ್ಥಿಗಳು ಪಡಬಾರದ ಕಷ್ಟಪಡುತ್ತಿದ್ದಾರೆ.

ಇನ್ನು ಈ ಮೌಲಾನಾ ಅಜಾದ್ ಶಾಲೆಗೆ ಸ್ವತಃ ಕಟ್ಟಡವಿಲ್ಲ. ಹೀಗಾಗಿ ಸದ್ಯ ಸರಕಾರಿ ಉರ್ದು ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿ‌ನ ಕಟ್ಟಡಗಳಲ್ಲಿ ತರಗತಿಗಳು ನಡೆಯುತ್ತಿದ್ದು, ಕೊಠಡಿಗಳು ಚಿಕ್ಕದಾಗಿವೆ. ಜೊತೆಗೆ ಇಕ್ಕಟ್ಟಿನ ಜಾಗದಲ್ಲಿ ತರಗತಿ ಕೊಠಡಿ ಇರುವುದರಿಂದ ಕಷ್ಟಪಟ್ಟು ವಿದ್ಯಾರ್ಥಿಗಳು ತರಗತಿಗೆ ಹೋಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ತಲೆದೊರಿದೆ. 

 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more