Covid 19 Guidelines: ಜ. 27ಕ್ಕೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ: ‌ಕೋವಿಡ್ ರೂಲ್ಸ್‌ನಿಂದ ಮತ್ತಷ್ಟು ರಿಲೀಫ್?

Jan 24, 2022, 12:12 PM IST

ಬೆಂಗಳೂರು (ಜ. 24): ರಾಜ್ಯದ ಕೋವಿಡ್‌ ಇತಿಹಾಸದಲ್ಲೇ (Covid 19) ಭಾನುವಾರದ ಸೋಂಕಿನ ಪ್ರಕರಣಗಳು ಹೊಸ ದಾಖಲೆ ಸೃಷ್ಟಿಸಿದ್ದು, ಒಂದೇ ದಿನ 50,210 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಎರಡನೇ ಅಲೆ ಉತ್ತುಂಗದಲ್ಲಿದ್ದ ಮೇ 5ರಂದು 50,112 ಪ್ರಕರಣ ಪತ್ತೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು. ಈ ಮಧ್ಯೆ ರಾಜ್ಯದಲ್ಲಿ ಕೊರೋನಾ ರೂಲ್ಸ್‌ ಮತ್ತಷ್ಟು ಸಡಿಲಗೊಳ್ಳುವ ಸಾಧ್ಯತೆಗಳಿವೆ. ಗುರುವಾರ ಸಿಎಂ ಬಸವರಾಜ್‌ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲ್ಲಿದ್ದು ಕೊರೋನಾ ನಿಯಮಗಳ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. 

ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಒಂದೇ ದಿನ ಅರ್ಧ ಲಕ್ಷ ಕೊರೋನಾ ಕೇಸ್ ಪತ್ತೆ

ಈಗಾಗಲೇ ಸರ್ಕಾರ  ವಾರಾಂತ್ಯಗಳಲ್ಲಿ ಜಾರಿಗೊಳಿಸಿದ್ದ ವೀಕೆಂಡ್‌ ಕರ್ಫ್ಯೂ (Weekend Curfew) ರದ್ದು ಮಾಡಿದೆ. ಈ ಬೆನ್ನಲ್ಲೇ ನೈಟ್‌ ಕರ್ಫ್ಯೂ (Night Curfew) ಸಮಯ ವಿನಾಯಿತಿ ಹಾಗೂ 50 50 ರೂಲ್ಸ್ ಬಗ್ಗೆ ಚರ್ಚೆ ನಡೆಯಲಿದ್ದು ರಾಜ್ಯದ ಜನರಿಗೆ ಮತ್ತಷ್ಟು  ರೀಲೀಫ್‌ ನೀಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಭಾನುವಾರ ಸೋಂಕಿನ ಪ್ರಕರಣಗಳು ಅರ್ಧ ಲಕ್ಷದ ಗಡಿ ದಾಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3.57 ಲಕ್ಷಕ್ಕೆ ಏರಿಕೆ ಕಂಡಿದೆ.