
ಮಂಗಳೂರು (ಆ,9): ಧರ್ಮಸ್ಥಳ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ, ನಿಗೂಢ ಹೆಜ್ಜೆಗಳನ್ನು ಇಡುತ್ತಿದ್ದು, ಹೊಸ ಸ್ಥಳಗಳಲ್ಲಿ ಶೋಧಕಾರ್ಯ ಮುಂದುವರಿಸಿದೆ. ಪ್ರಮುಖವಾಗಿ, ಬೆಂಗಳೂರಿನಿಂದ ಜಿಪಿಆರ್ (Ground Penetrating Radar) ತಂತ್ರಜ್ಞಾನವನ್ನು ತರಿಸಲು ನಿರ್ಧರಿಸಿದೆ. ಇದು ಅತ್ಯಂತ ದುಬಾರಿ ತಂತ್ರಜ್ಞಾನವಾಗಿದ್ದು, ಮಳೆಗಾಲದ ಕಾರಣ ಜೌಗು ಪ್ರದೇಶಗಳಲ್ಲಿ ಇದರ ಬಳಕೆಗೆ ಸವಾಲು ಎದುರಾಗಬಹುದು ಎನ್ನಲಾಗಿದೆ.
ಇತ್ತ, 14ನೇ ಸ್ಪಾಟ್‌ನಲ್ಲಿ ಸಿಕ್ಕಿದ ಅಸ್ಥಿಪಂಜರದ ಕುರಿತು ತನಿಖೆ ಚುರುಕುಗೊಂಡಿದ್ದು, ಡಿಎನ್‌ಎ ವರದಿಗಾಗಿ ಕಾಯಲಾಗುತ್ತಿದೆ. ಮತ್ತೊಂದೆಡೆ, ಧರ್ಮಸ್ಥಳದಿಂದ 2 ಕಿ.ಮೀ ದೂರದಲ್ಲಿರುವ ಬೊಳಿಯಾರ್ ಅರಣ್ಯ ಪ್ರದೇಶದ 15ನೇ ಪಾಯಿಂಟ್‌ನಲ್ಲಿ ಎಸ್‌ಐಟಿ ಶೋಧ ನಡೆಸುತ್ತಿದೆ. ಈ ಪ್ರದೇಶದಲ್ಲಿ 1986ರಲ್ಲಿ ಕೊಲೆಯಾದ ಪದ್ಮಲತಾ ಅಥವಾ 2010ರಲ್ಲಿ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿಯ ಮೃತದೇಹ ಹೂತಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ಶೋಧ ಕಾರ್ಯಕ್ಕಾಗಿ ಎಸ್‌ಐಟಿ ಉಪ್ಪಿನ ಮೂಟೆಗಳನ್ನು ಬಳಸುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ, ಹೊಸ ಸುಳಿವುಗಳ ಆಧಾರದ ಮೇಲೆ ಎಸ್‌ಐಟಿ ತನ್ನ ತನಿಖೆಯನ್ನು ನಿಗೂಢವಾಗಿ ಮುಂದುವರಿಸಿದೆ.