- ವೈರಸ್‌ನಿಂದಾಗಿ ಒಣಗಿ ಹೋಗುತ್ತಿವೆ ಬೇವಿನ ಮರದ ಎಲೆಗಳು!
- ಸಿಂಧನೂರು ತಾಲೂಕಿನ ತುಂಬಾ ನೂರಾರು ಕಡೆ ಒಣಗಿ ನಿಂತಿವೆ ಬೇವಿನ ಮರಗಳು
- ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಬೇವಿನ ಮರ ಸಂಪೂರ್ಣ ಹಳದಿ ಹಳದಿ
ರಾಯಚೂರು (ಸೆ. 09): ಸಿಂಧನೂರು ತಾಲೂಕಿನ ತುಂಬಾ ನೂರಾರು ಕಡೆ ಒಣಗಿ ನಿಂತಿವೆ ಬೇವಿನ ಮರಗಳು, ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಬೇವಿನ ಮರ ಈಗ ಸಂಪೂರ್ಣ ಹಳದಿ ಹಳದಿಯಾಗಿದೆ.
ಬೇವಿನಮರಕ್ಕೆ ವಿಚಿತ್ರ ಕಾಯಿಲೆ ನೋಡಿ ಸ್ಥಳೀಯರು ಕಂಗಾಲಾಗಿ, ಮರವನ್ನೇ ಕಡಿಯುತ್ತಿದ್ದಾರೆ. ಬೇವಿನ ಮರ ಕಡಿಯದಂತೆ ಪರಿಸರ ಪ್ರೇಮಿ ಅಮರೇಗೌಡ ಮನವಿ ಮಾಡಿದ್ದಾರೆ.