- ಮಂಗಳೂರು ರಸ್ತೆಯಲ್ಲಿ ಸಾಗುವ ಪ್ರಯಾಣಿಕರ ಪರದಾಟ
- ಮೂಡಿಗೆರೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ನಿತ್ಯ ನರಳಾಟ
- ನಿತ್ಯವೂ ಟ್ರಾಫಿಕ್ ಜಾಮ್, 3 ಕಿಮೀ ಸಾಗೋಕೆ ಹರಸಾಹಸ
ಚಿಕ್ಕಮಗಳೂರು (ಡಿ. 29): ನಿತ್ಯವೂ ಟ್ರಾಫಿಕ್ ಜಾಮ್ (Traffic Jam) 3 ಕಿಮೀ ಸಾಗೋಕೆ ಬೇಕು ಸಾಕಷ್ಟು ಟೈಂ, ಸಾಲು ಸಾಲಾಗಿ ಸಾಗೋದ್ರಲ್ಲಿ ವಾಹನ ಸವಾರರಿಗಂತೂ ಸುಸ್ತೋ ಸುಸ್ತು, ರಸ್ತೆ ಅಗಲೀಕರಣ (Road Widen) ಮಾಡಿ ಅನ್ನೋ ಬೇಡಿಕೆ ಇಟ್ಟು ದಶಕ ಕಳೆದ್ರು ಅಗಲೀಕರಣವಾಗಿಲ್ಲ. ಜನರ ಪರದಾಟ ನಿಂತಿಲ್ಲ. ಹಿಡಿಶಾಪ ಹಾಕ್ತಾ ಇದ್ದಾರೆ ಸ್ಥಳೀಯರು. ಇಂತಹದ್ದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಮೂಡಿಗೆರೆ (Mudigere)
ಮೂಡಿಗೆರೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್‌ಗೆ (Traffic Jam) ಸಿಲುಕಿಲ್ಲ ಎನ್ನುವವರು ಒಬ್ಬರೂ ಇಲ್ಲ. ಪ್ರತಿಯೊಬ್ಬರೂ ಈ ಅನುಭವಕ್ಕೆ ಸಿಲುಕಿದ್ದಾರೆ. ರಸ್ತೆ ಅಗಲೀಕರಣ (Road Widen) ಮಾಡಿ ಎನ್ನುವ ಬೇಡಿಕೆಯನ್ನು ಮುಂದಿಡುತ್ತಲೇ ಇದ್ದಾರೆ. ಆದರೂ ಅಗಲೀಕರಣಕ್ಕಂತೂ ಅನುಮತಿ ಸಿಕ್ತಿಲ್ಲ. ಚಿಕ್ಕಮಗಳೂರು (Chikkamagaluru) ಮಂಗಳೂರು (Mangaluru)ಹೆದ್ದಾರಿಯಲ್ಲಿರೋ ಈ ರಸ್ತೆ ಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಎಸ್ ಯಡಿಯೂರಪ್ಪ (BS Yediyurappa) ಅವ್ರ ಅವಧಿಯಲ್ಲಿ ಅಗಲೀಕರಣಕ್ಕೆ ಹಣ ಬಿಡುಗಡೆ ಮಾಡಿದ್ರು, ಅದ್ರೆ ಆ ಹಣವನ್ನು ಬೇರೆಡೆ ಬಳಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಒಟ್ಟಾರೆ ಮೂಡಿಗೆರೆ ಜನರಿಗಂತೂ ನಿತ್ಯ ಟ್ರಾಫಿಕ್ ಜಾಮ್ ಅತೀ ದೊಡ್ಡ ತಲೆನೋವೇ. ಎಲ್ಲಿಗಾದ್ರೂ ಹೊರಟ್ರೆ ಊರು ಬಿಟ್ರೆ ಸಾಕಪ್ಪ ಸಾಕು ಅನಿಸಿದೆ. ಕೂಡಲೇ ರಸ್ತೆ ಅಗಲೀಕರಣ ಮಾಡಿ ಅಂತಾ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ಧಾರೆ.