Dec 29, 2022, 4:47 PM IST
ಬೆಂಗಳೂರು (ಡಿ.29): 2023ರ ಹೊಸ ವರ್ಷಚಾರಣೆ ಪ್ರಯುಕ್ತ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಅವಧಿ ವಿಸ್ತರಣೆ ಮಾಡುತ್ತಿದೆ. ಜನವರಿ 1, 2023ರ ಮುಂಜಾವು 2 ಗಂಟೆಯವರೆಗೆ ಮೆಟ್ರೋ ಸಂಚಾರ ಇರಲಿದೆ. ಪ್ರತಿನಿತ್ಯ ರಾತ್ರಿ 11 ಗಂಟೆಯವರೆಗೆ ಸೇವೆ ನೀಡುತ್ತಿದ್ದ ನಮ್ಮ ಮೆಟ್ರೋ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ 3 ಗಂಟೆಗಳ ಕಾಲ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ ಮಾಡುತ್ತಿದೆ. 11.30 ರ ನಂತ್ರ ಎಂ.ಜಿ.ರೋಡ್, ಟ್ರಿನಿಟಿ ,ಕಬ್ಬನ್ ಪಾರ್ಕ್ ನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕಾಗದ ಟಿಕೆಟ್ ವಿಸ್ತರಣೆ ಮಾಡಲಿದೆ. ಹೀಗಾಗಿ ವಿಸ್ತರಿಸಿದ 3 ಗಂಟೆಗಳ ಅವಧಿಯಲ್ಲಿ ಟೋಕನ್ ವಿತರಣೆ ಇಲ್ಲ. ಜೊತೆಗೆ ಬಿಎಂಆರ್‌ಸಿಎಲ್ 50 ರೂಪಾಯಿ ಟಿಕೆಟ್ ನಿಗದಿ ಮಾಡಿದೆ.
2 ಗಂಟೆಯ ವರೆಗೆ ಮೆಟ್ರೋ ಸಂಚಾರ ಅವಕಾಶವಿರುವ ನಿಲ್ದಾಣಗಳಿಂದ ಡಿ.31 ರ ರಾತ್ರಿ 8 ಗಂಟೆಯಿಂದಲೇ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಲಭ್ಯವಿದ್ದು ಈ ನಿಲ್ದಾಣಗಳ ಮೂಲಕ ಸಂಚಾರ ಮಾಡಬಹುದು. ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಹೊಂದಿರುವ ಪ್ರಯಾಣಿಕರು ಮೊದಲಿನಂತೆಯೇ ರಿಯಾಯಿತಿ ದರದಲ್ಲೇ ಪ್ರಯಾಣಿಸಬಹುದು. ಕಬ್ಬನ್ ಪಾರ್ಕ್, ಎಂ.ಜಿ.ರೋಡ್, ಟ್ರಿನಿಟಿ ಹೊರತುಪಡಿಸಿ ಯಾವುದೇ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು. ಟೋಕನ್ ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಟಿಕೆಟ್ ಮೂಲಕ ಸಾಮಾನ್ಯ ದರದಲ್ಲಿ ಪ್ರಯಾಣಿಸಬಹುದು ಎಂದು ಹೊಸ ವರ್ಷ ಕುರಿತಂತೆ ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ.