Gowthami K | Published: Jan 29, 2025, 8:46 PM IST
ಅದು ಕ್ರಿಶ್ಚಿಯನ್ ಫ್ಯಾಮಿಲಿ. ಅಪ್ಪ ಅಮ್ಮ. ಮಗ ಸೊಸೆ. ಎಲ್ಲರೂ ಖುಷಿಖುಷಿಯಾಗಿದ್ರು. ಮಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೆ. ಸೊಸೆ ಟೀಚರ್. ದುಡಿದಿದ್ದರಲ್ಲಿ ನೆಮ್ಮದಿಯಾಗಿದ್ರು. ಆದ್ರೆ ಆವತ್ತೊಂದು ದಿನ ಎಲ್ಲರೂ ಚರ್ಚ್‌ಗೆ ಹೋಗಿದ್ದಾಗ. ಮನೆಯಲ್ಲಿ ಮಗನೊಬ್ಬನೇ ಇದ್ದ. ಆದ್ರೆ ಚರ್ಚ್ನಿಂದ ವಾಪಸ್ ಬಂದು ನೋಡಿದ್ರೆ ಮಗ ನೇಣಿಗೆ ಶರಣಾಗಿದ್ದ. ಒಂದು ಡೆತ್‌ನೋಟ್ ಬರೆದಿಟ್ಟು ಆತ ಪರಲೋಕ ಸೇರಿದ್ದ. ಅದ್ರೆ ಆ ಡೆತ್ ನೋಟ್ ನೋಡಿದಾಗಲೇ ನೋಡಿ ಅಲ್ಲಿಗೆ ಬರೋದು ಸೊಸೆಯ ಟಾರ್ಚರ್ ಕಹನಿ. ಹೆಂಡತಿಯ ಕಾಟಕ್ಕೆ ಗಂಡ ಅಲ್ಲಿ ಪ್ರಾಣಬಿಟ್ಟಿದ್ದ. ಹೀಗೆ ಹೆಂಡತಿಯ ಕಾಟದಿಂದ ಪ್ರಾಣಬಿಟ್ಟ ಮತ್ತೊಬ್ಬ ಗಂಡಸಿನ ಕಥೆಯೇ ಇವತ್ತಿನ ಎಫ್.ಐ.ಆರ್.
ಎಲ್ಲರೂ ಪ್ರಾರ್ಥನೆಗಾಗಿ ಚರ್ಚ್‌ಗೆ ಹೋಗಿದ್ರೆ ಪೀಟರ್. ಸಾವಿನ ಮನೆಗೆ ಎಂಟ್ರಿ ಕೊಟ್ಟಿದ್ದ. ಆದ್ರೆ ಆತ ಸಾಯೋದಕ್ಕೂ ಮೊದಲು ಒಂದು ಡೆತ್‌ನೋಟ್ ಬರೆದಿಟ್ಟಿದ್ದ. ಅಷ್ಟೇ ಅಲ್ಲ ತನ್ನ ಕೊನೆಯ ಆಸೆಯನ್ನೂ ಹೇಳಿದ್ದ. ಹಾಗಾದ್ರೆ ಆ ಡೆತ್‌ನೋಟ್‌ನಲ್ಲಿ ಏನಿತ್ತು.. ಏನು ಆ ಗಂಡ ಹೆಂಡತಿ ಜಗಳ? ಹೇಳ್ತೀನಿ ಚಿಕ್ಕ ಬ್ರೇಕ್ ಆದ್ಮೇಲೆ.
ಅವರಿಬ್ಬರು ಮದುವೆಯಾಗಿ 2 ವರ್ಷವಾಗಿದೆ ಅಷ್ಟೇ. ಆದ್ರೆ ಜೊತೆಗಿದ್ದಿದ್ದು ಒಂದು ವರ್ಷ ಮಾತ್ರ. ಟೀಚರ್ ಕೆಲಸ ಮಾಡ್ತಿದ್ದ ಹೆಂಡತಿ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ರೆ ವಾಪಸ್ ಬರ್ತಿದ್ದಿದ್ದು ತಡರಾತ್ರಿ. ಯಾಕಮ್ಮ ಲೇಟು ಅಂತ ಪೀಟರ್ ಹೆತ್ತವರು ಕೇಳಿದ್ರೆ ಯಾಕೆ ಟಾರ್ಚರ್ ಕೊಡ್ತೀರಾ. ಇದು ನನ್ನ ಪರ್ಸನಲ್ ಅಂತ ಆವಾಜ್ ಹಾಕುತ್ತಿದ್ದಳು. ಅಷ್ಟೇ ಅಲ್ಲ ಕೇಸ್ ಹಾಕಿಬಿಡ್ತೀನಿ ಅನ್ನೋ ಬೆದರಿಕೆ. ಇಷ್ಟಲ್ಲದೇ ಒಂದು ದಿನ ಎಲ್ಲರೂ ಹೊರಗೆ ಹೋಗಿದ್ದಾಗ ಈ ಹೆಂಡತಿ ಮತ್ತೊಬ್ಬನ ಜೊತೆ ಏಕಾಂತದಲ್ಲಿದ್ದಳು. ಆಗ ಈಕೆ ರೆಡ್ ಹ್ಯಾಂಡಾಗೇ ತಗ್ಲಾಕಿಕೊಂಡಿದ್ಲು. ಯಾವಾಗ ತನ್ನ ವಿಚಾರ ಗೊತ್ತಾಯ್ತೋ ಆಕೆ ಸೀದಾ ತವರು ಮನೆಗೆ ಹೋಗಿ ಗಂಡನಿಗೆ ಡಿವೋರ್ಸ್ ನೋಟೀಸ್ ಕಳಿಸಿದ್ಲು. ಅಷ್ಟೇ ಅಲ್ಲ ಗಂಡನಿಗೇ 20 ಲಕ್ಷಕ್ಕೆ ಬೇಡಿಕೆ ಇಟ್ಟಳು. ಆಮೇಲೆ ನಡೆದಿದ್ದೆಲ್ಲಾ ಕೇವಲ ಟಾರ್ಚರ್ ಅಷ್ಟೇ.
ಪೀಟರ್ ಬಲಿಯಾಗೋದಕ್ಕೆ ಪಿಂಕಿ ಕಾರಣಳಾದಳು. ಆದ್ರೆ ಇಲ್ಲೂಸ್ ವಿವಾಹಿತ ಮಹಿಳೆಯರ ಮೇಲಿನ ದೌರ್ಜನ್ಯವನ್ನ ತಡೆಯಲು ಮಾಡಿದ್ದ ಕಾನೂನಗಳ ದುರ್ಬಳಕೆಯಾಗಿದ್ಯಾ ? ಪಿಂಕಿ ಅವನಿಗೆ ಹೇಗೆಲ್ಲಾ ಟಾರ್ಚರ್ ಕೊಟ್ಟಿದ್ಲು ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ .