ಪೇಜಾವರ ಮಠದ ಮುಂದೆ ಮುಸ್ಲಿಮರ ಗುಂಪು: ಶ್ರೀಗಳ ಸ್ಮರಣೆಯ ಕಂಪು!

Jan 15, 2020, 8:15 PM IST

ಉಡುಪಿ(ಜ.15): ಉಡುಪಿಯಲ್ಲೀಗ ಉತ್ಸವಗಳ ಸಂಭ್ರಮ.ಮಂಗಳವಾರದ ಮಕರ ಸಂಕ್ರಾಂತಿ ಉತ್ಸವದ ವೇಳೆ ಒಂದು ವಿಶಿಷ್ಟ ಘಟನೆ ನಡೆಯಿತು. ಸಾವಿರಾರು ಜನರು ಸೇರಿದ್ದ ಜಾತ್ರೆಯಲ್ಲಿ ಒಂದಷ್ಟು ಮುಸ್ಲೀಂ ಬಂಧುಗಳು ಕಾಣಿಸಿಕೊಂಡರು. ಪೇಜಾವರ ಮಠ ಮುಂಭಾಗದಲ್ಲಿ ಗುಂಪು ಸೇರಿದರು. ಜನರ ಗುಸು ಗುಸು ಆರಂಭವಾಯ್ತು. ಪೇಜಾವರ ಮಠದ ಅಧಿಕಾರಿಗಳು ಬಂದು ವಿಚಾರಿಸಿದರು. ಇವರೆಲ್ಲಾ ಭಟ್ಕಳದಿಂದ ಬಂದ ಮುಸ್ಲಿಂ ಸಮುದಾಯದ ಪ್ರಮುಖರಾಗಿದ್ದರು. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು. ಸ್ವಾಮಿಗಳ ಅಗಲಿಕೆಯಿಂದ ದುಖಿತರಾಗಿದ್ದ ಇವರು ಭಟ್ಕಳದಿಂದ ಪೇಜಾವರ ಮಠದಲ್ಲಿ ಶೃದ್ದಾಂಜಲಿ ಸಲ್ಲಿಸಲೆಂದೇ ಬಂದಿದ್ದರು.ವಿಷಯ ತಿಳಿದ ಮಠದ ಅಧಿಕಾರಿಗಳು ಒಳಗೆ ಆಹ್ವಾನಿಸಿ, ವಿಚಾರ ವಿನಿಮಯ ಮಾಡಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ...