Mar 13, 2022, 4:04 PM IST
ಚಾಮರಾಜನಗರ (ಮಾ. 12): ಇಲ್ಲಿನ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹಾದೇಶ್ವರ ಸ್ವಾಮಿಯ ಹುಂಡಿಯಲ್ಲಿ ಕೇವಲ 28 ದಿನದಲ್ಲಿ .2.83 ಕೋಟಿ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. .2,83,12,841 ನಗದು, 3.800 ಗ್ರಾಂ ಬೆಳ್ಳಿ, 73 ಗ್ರಾಂ ಚಿನ್ನ ಸಂಗ್ರಹವಾಗಿದೆ. ಈ ಹಿಂದೆ .2.50 ಕೋಟಿ ಸಂಗ್ರಹವಾಗಿದ್ದು, ಈವರೆಗಿನ ದಾಖಲೆ. ಆದರೆ ಅತೀ ಕಡಿಮೆ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟುಹಣ ಸಂಗ್ರಹವಾಗಿದೆ. ಶಿವರಾತ್ರಿ ಪ್ರಯುಕ್ತ ಲಕ್ಷಾಂತರ ಜನರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು, ದೇವರ ದರ್ಶನ ಪಡೆದಿದ್ದರು.