ಉಡುಪಿ ಕಮಲಾಕ್ಷಿ ಸಹಕಾರಿ ಸಂಘದಲ್ಲಿ ಬಹುಕೋಟಿ ಹಗರಣ ನಡೆದಿದ್ದು, 100 ಕೋಟಿಗೂ ಹೆಚ್ಚು ಹಣ ವಂಚನೆ ಆರೋಪ ಕೇಳಿ ಬಂದಿದೆ.
ಉಡುಪಿ : ಉಡುಪಿ ಕಮಲಾಕ್ಷಿ ಸಹಕಾರಿ ಬ್ಯಾಂಕ್ ವಿರುದ್ಧ 100 ಕೋಟಿಗೂ ಅಧಿಕ ಠೇವಣಿ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಹಕಾರಿ ಬ್ಯಾಂಕ್ ಮುಖ್ಯಸ್ಥ ಬಿ.ವಿ ಲಕ್ಷ್ಮಿನಾರಾಯಣ್ ನಾಪತ್ತೆಯಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೋಲಿಸರು ಯತ್ನಿಸಿದ್ದಾರೆ. ಗ್ರಾಹಕರ ಒತ್ತಡದಿಂದ ಮಾತ್ರೆ ನುಂಗಲು ಮಹಿಳಾ ಸಿಬ್ಬಂದಿ ಯತ್ನಿಸಿದ್ದಾರೆ. ಹಣಕ್ಕಾಗಿ ಒಂದು ತಿಂಗಳಿಂದ ಗ್ರಾಹಕರು ಪರದಾಡುತ್ತಿದ್ದು, ಕೋಟ್ಯಂತರ ರೂ. ಠೇವಣಿ ಇಟ್ಟಿದ್ದಾರೆ.