* ನಾನು ಕಂದಾಯ ಸಚಿವನಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ
* ರಾಜ್ಯಾದ್ಯಂತ 250 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ
* ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಯೋಜನೆ ಇದಾಗಿದೆ
ಯಾದಗಿರಿ(ಮಾ.20): ಸರ್ಕಾರಿ ಕಚೇರಿಗಳಿಗೆ ಜನರು ಅಲೆಯುವುದನ್ನ ತಪ್ಪಿಸಲು ಗ್ರಾಮ ವಾಸ್ತವ್ಯ ಸಹಕಾರಿಯಾಗಿದೆ. ಹೀಗಾಗಿ ನಾನು ಕಂದಾಯ ಸಚಿವನಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಅಂತ ಕಂದಾಯ ಸಚಿವ ಅಶೋಕ್ ತಿಳಿಸಿದ್ದಾರೆ. ರಾಜ್ಯಾದ್ಯಂತ 250 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಯುತ್ತಿದೆ. ಪ್ರತಿಯೊಂದಕ್ಕೂ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಇದನ್ನ ತಡೆಯಲು ಅಧಿಕಾರಿಗಳೇ ಹಳ್ಳಿ ಕಡೆಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಯೋಜನೆ ಇದಾಗಿದೆ. ಈ ಮೂಲಕ ಸರಿಯಾಗಿ ಕೆಲಸ ಮಾಡದ ಸರ್ಕಾರಿ ಅಧಿಕಾರಿಗಳಿಗೆ ಸಚಿವ ಅಶೋಕ್ ಬಿಸಿ ಮುಟ್ಟಿಸಿದ್ದಾರೆ.
Tumakuru Bus accident: ಸಾವಿನ ಸವಾರಿಯಾದ ಬಸ್, ಕಾಲೇಜಿಗೆ ಹೋಗಿ ಬರ್ತೀನಿ ಅಂದವರು ಮಸಣ ಸೇರಿದರು