Weekend Curfew: ತರಕಾರಿ ಖರೀದಿಗೆ ಮುಗಿಬಿದ್ದ ಜನ: ಬೆಳ್ಳಂಬೆಳಿಗ್ಗೆ ಲಾಠಿ ರುಚಿ ತೋರಿಸಿದ ಪೊಲೀಸರು..!

Jan 8, 2022, 10:56 AM IST

ವಿಜಯಪುರ(ಜ.08):  ವೀಕೆಂಡ್‌ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಇಂದು(ಶನಿವಾರ) ಬೆಳಿಗ್ಗೆ ನಗರದಲ್ಲಿ ಪೊಲೀಸರು ಫೀಲ್ಡಿಗಿಳಿದಿದ್ದಾರೆ. ಹೌದು, ಜನರು ಗುಂಪು ಗುಂಪಾಗಿ ನಿಲ್ಲದಂತೆ ಪೊಲೀಸರು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಅಥಣಿ-ಸಿಂದಗಿ ರಾಜ್ಯ ಹೆದ್ದಾರಿಯ ಒಂದು ಬದಿಯನ್ನ ಬಂದ್‌ ಮಾಡಲಾಗಿದೆ. ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.  ಗುಂಪಾಗಿ ನಿಂತವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಚದುರಿಸಿದ್ದಾರೆ. ರಸ್ತೆ ಮೇಲೆ ಪತ್ರಿಕೆ ಮಾರಲು ಕೂತವರಿಗೂ ಪೊಲೀಸರು ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.  ಇನ್ನು ಬೆಳಗಾವಿಯ ಜೈಕಿಸಾನ್‌ ತರಕಾರಿ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದಾರೆ. ತರಾಕರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಈ ವೇಳೆ ಜನರು ಕೋವಿಡ್‌ ರೂಲ್ಸ್‌ಗಳನ್ನ ಬ್ರೇಕ್‌ ಮಾಡಿದ್ದಾರೆ. 

Weekend Curfew: ಜನಜಂಗುಳಿಯಿಂದ ಇರುತ್ತಿದ್ದ ಕೆ ಆರ್ ಮಾರ್ಕೆಟ್ ಖಾಲಿ ಖಾಲಿ!