Nov 27, 2020, 3:32 PM IST
ರಾಯಚೂರು (ನ. 27): ಇದೇನು ಬಸ್ಸೋ, ಕಸದ ತೊಟ್ಟಿಯೋ ಅನ್ನೋ ಹಾಗಿದ್ದ ಸಾರಿಗೆ ಬಸ್‌ನ ನಿರ್ವಹಣೆ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು- ಬೆಂಗಳೂರು ಮಾರ್ಗದ ಸ್ಲೀಪರ್ ಬಸ್‌ನಲ್ಲಿ ಕಂಡು ಬಂದ ಅವ್ಯವಸ್ಥೆ ಇದು. ಇಲ್ಲಿ ಕೋವಿಡ್ ನಿಯಮ ಪಾಲನೆಯೂ ಇಲ್ಲ, ಸ್ವಚ್ಛತೆಯೂ ಇಲ್ಲ. ಸೀಟುಗಳು ಹಾಳಾಗಿದ್ದರೂ ಸರಿ ಮಾಡಿಸಿಲ್ಲ. ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾರ್ಥಿಗೆ MBBS ಮಾಡುವ ಆಸೆ; ವೈದ್ಯನಾಗುವ ಕನಸಿಗೆ ಬೇಕಾಗಿದೆ ನೆರವಿನ ಹಸ್ತ
ಬಸ್ಸಿನ ಅವ್ಯವಸ್ಥೆ ನೋಡಿ ರಿಸರ್ವೇಷನ್ ಆಗಿದ್ರೂ ಬಸ್ ಹತ್ತಲು ಒಪ್ಪದೇ, ಬದಲಿ ಬಸ್ ವ್ಯವಸ್ಥೆ ಮಾಡಲು ಪಟ್ಟು ಹಿಡಿದರು. ಸಾರಿಗೆ ಸಿಬ್ಬಂದಿ- ಪ್ರಯಾಣಿಕರ ಮಾತಿನ ಚಕಮಕಿ ನಡೆದು, ಕೊನೆಗೂ ಪ್ರಯಾಣಿಕರ ಒತ್ತಾಯಕ್ಕೆ ಮಣಿದು ಸಾರಿಗೆ ಸಿಬ್ಬಂದಿ ಬದಲಿ ಬಸ್ ವ್ಯವಸ್ಥೆ ಮಾಡಿದರು.