ಅಭಿವೃದ್ಧಿ (Development) ಅನ್ನೋದು ಕೆಲ ಸಾಮಾನ್ಯ ಅಂಶಗಳನ್ನು ಒಳಗೊಂಡಿದೆ. ಆದ್ರೆ ಮಂಗಳೂರಿನ ಸುಂದರವಾದ ಮತ್ತು ಪ್ರಮುಖ ಪಾರ್ಕ್ ನ್ನು ಅಭಿವೃದ್ಧಿಯ ಹೆಸರಿನಲ್ಲಿ ಅವಲಕ್ಷಣ ಮಾಡಲು ಮಂಗಳೂರು ಮಹಾನಗರ ಪಾಲಿಕೆ (MCC) ಹೊರಟಿದೆ.
ಮಂಗಳೂರು (ಜ. 10): ಅಭಿವೃದ್ಧಿ (Development) ಅನ್ನೋದು ಕೆಲ ಸಾಮಾನ್ಯ ಅಂಶಗಳನ್ನು ಒಳಗೊಂಡಿದೆ. ಆದ್ರೆ ಮಂಗಳೂರಿನ ಸುಂದರವಾದ ಮತ್ತು ಪ್ರಮುಖ ಪಾರ್ಕ್ ನ್ನು ಅಭಿವೃದ್ಧಿಯ ಹೆಸರಿನಲ್ಲಿ ಅವಲಕ್ಷಣ ಮಾಡಲು ಮಂಗಳೂರು ಮಹಾನಗರ ಪಾಲಿಕೆ (MCC) ಹೊರಟಿದೆ. ಅಭಿವೃದ್ಧಿ ಕಾರ್ಯದಲ್ಲಿ ಭವಿಷ್ಯದ ಬಗ್ಗೆ ಚಿಂತಿಸಿದ್ರೆ ಇಲ್ಲಿನ ಇಂಜಿನಿಯರ್ ಗಳು ಮತ್ತು ಸ್ಮಾರ್ಟ್ ಸಿಟಿ ವಿಭಾಗ ಪಾರ್ಕ್ಅನ್ನು ಇನ್ನೂ ಇಕ್ಕಟ್ಟು ಮಾಡಲು ಹೊರಟಿದ್ದಾರೆ.
ಕಡಲತಡಿ ಮಂಗಳೂರನ್ನ ಇನ್ನೂ ಸ್ಮಾರ್ಟ್ ಆಗಿ ಮಾಡಲು ಬಂದ ಯೋಜನೆ ಸ್ಮಾರ್ಟ್ ಸಿಟಿ ಯೋಜನೆ (Smart City Project) ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿ ಮಂಗಳೂರನ್ನು ಸ್ಮಾರ್ಟ್ ಮಾಡಿ ಚೆಂದಗಾಣಿಸುವ ಯೋಜನೆ. ಆದ್ರೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಸ್ಮಾರ್ಟ್ ಮಾಡೋದು ಬಿಟ್ಟು ಇನ್ನು ಕಾಂಪ್ಲೀಕೇಟ್ ಮಾಡಲು ಹೊರಟಿದ್ದಾರೆ. ಮಂಗಳೂರಿನ ಕದ್ರಿ ಪಾರ್ಕ್, ಮಂಗಳೂರಿನ ಎಸ್ತಾಬ್ಲಿಷ್ಮೆಂಟ್ ಪಾರ್ಕ್ ಅಂತಾನೆ ಹೇಳಬಹುದಾಗಿದೆ. ಈ ಪಾರ್ಕ್ ಪ್ರಮುಖ ಭಾಗದಲ್ಲಿರೋದು ಇಷ್ಟು ಮಹತ್ವಕ್ಕೆ ಕಾರಣ. ಈ ಪಾರ್ಕ ನ್ನು ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಅವಲಕ್ಷಣ ಮಾಡಲು ಪಾಲಿಕೆ ಹೊರಟಿದೆ. ಯಾವುದಾದ್ರು ಅಭಿವೃದ್ಧಿ ಅಂದ್ರೆ ಅದು ದೂರ ದೃಷ್ಟಿಯನ್ನು ಇಟ್ಟುಕೊಂಡಿರಬೇಕಾಗಿರುತ್ತೆ.
ಆದ್ರೆ ಇಲ್ಲಿ ಮಾತ್ರ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ತಲೆ ಹಿಂದೆ ಓಡಿದೆ. ಈಗಾಗ್ಲೇ ಇದ್ದ ಅಗಲವಾದ ರಸ್ತೆಯನ್ನು 20 ಅಡಿಗೆ ಕಿರಿದಾಗಿ ಮಾಡಲಾಗುತ್ತಿದೆ. ಇದ್ದ ಫುಟ್ ಪಾತ್‌ನ ಮೇಲೆ ಅಂಗಡಿಗಳನ್ನು ಮಾಡಲಾಗುತ್ತಿದೆ. ಇದು ಭವಿಷ್ಯದ ಪ್ಲಾನ್‌ಗಳಿಗೆ ಹೊಡೆತ ಕೊಡೋದು ಪಕ್ಕಾ. ಈ ರಸ್ತೆಯನ್ನು ಕೇವಲ ಪಾದಚಾರಿಗಳಿಗೆ ಮಾತ್ರ ಮೀಸಲಿಡುವುದಾಗಿ ಅಧಿಕಾರಿಗಳು ಹೇಳತ್ತಿದ್ದಾರೆ. ಆದ್ರೆ ರಸ್ತೆ ಅನ್ನೊದು ಯಾವ ಸಂದರ್ಭದಲ್ಲಿ ಹೇಗೆ ಉಪಯೋಗಕ್ಕೆ ಬರುತ್ತೆ ಅನ್ನೊದನ್ನು ಹೇಳಲು ಸಾಧ್ಯವಿಲ್ಲ. ಆದ್ರಿಂದ ರಸ್ತೆಯಲ್ಲಿ ವಾಹನಗಳನ್ನು ನಿರ್ಭಂದಿಸಿದ್ರು ಕೂಡ ಅದನ್ನು ದೊಡ್ಡದಾಗಿಯೇ ಇಟ್ಟುಕೊಳ್ಳಬಹುದಿತ್ತು ಅನ್ನೋದು ಪ್ರತಿಪಕ್ಷಗಳ ವಾದ.
ಇನ್ನು ಈ ಬಗ್ಗೆ ಪಾಲಿಕೆಯ ಮೇಯರ್, ಕಮಿಷನರ್‌ಗೆ ವಿಪಕ್ಷಗಳು ಹಲವು ಬಾರಿ ದೂರು ನೀಡಿ ಸರಿಪಡಿಸಲು ಹೇಳಿದ್ರು ಕೂಡ ಅದನ್ನು ಸರಿಪಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿಲ್ಲ. ಆದ್ರಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ತಲಾ 500 ಕೋಟಿ ಅನುದಾನ ನೀಡಿದ್ದು, ಇನ್ನು ಇದೇ ಪಾರ್ಕ್‌ಗೆ ಹೆಚ್ಚುವರಿ ಹಣವನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆದ್ರೆ ಹೆಚ್ಚುವರಿ ಹಣ ಸದುಪಯೋಗವಾಗದೇ ಪೋಲಾಗುತ್ತಿದೆ ಅಂತಾ ವಿಪಕ್ಷಗಳು ಟೀಕಿಸಿವೆ.