ಮಂಗಳೂರು Justice for Abhishek ಕೇಸಿನ ಹನಿಟ್ರ್ಯಾಪ್ ಆರೋಪಿ ನಿರೀಕ್ಷಾ ಬಂಧನ! ರೂಮೇಟ್ ನಗ್ನ ವಿಡಿಯೋ ರೆಕಾರ್ಡ್!

ಮಂಗಳೂರು Justice for Abhishek ಕೇಸಿನ ಹನಿಟ್ರ್ಯಾಪ್ ಆರೋಪಿ ನಿರೀಕ್ಷಾ ಬಂಧನ! ರೂಮೇಟ್ ನಗ್ನ ವಿಡಿಯೋ ರೆಕಾರ್ಡ್!

Published : Oct 20, 2025, 08:54 PM IST

ಮಂಗಳೂರಿನಲ್ಲಿ ತನ್ನ ಇಬ್ಬರು ರೂಮೇಟ್‌ಗಳ ಬಟ್ಟೆ ಬದಲಾಯಿಸುವ ವಿಡಿಯೋ ಮಾಡಿ ವೈರಲ್ ಮಾಡಿದ ಆರೋಪದ ಮೇಲೆ ನಿರೀಕ್ಷಾ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ಕಾರ್ಕಳದಲ್ಲಿ ಆತ್ಮಹ*ತ್ಯೆ ಮಾಡಿಕೊಂಡ ಅಭಿಷೇಕ್ ಎಂಬ ಯುವಕನ ಡೆತ್ ನೋಟ್‌ನಿಂದ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ (ಅ.20): ಮಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ಯುವತಿಯರಿಬ್ಬರು ಬಟ್ಟೆ ಬದಲಾಯಿಸುತ್ತಿದ್ದ ವಿಡಿಯೋವನ್ನು ಮಾಡಿ ವೈರಲ್ ಮಾಡಿದ ಆರೋಪದ ಮೇಲೆ, ಯುವತಿಯರ ರೂಮೇಟ್ ಆಗಿದ್ದ ಇನ್ನೊಬ್ಬ ಯುವತಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕಲಶ ಮೂಲದ ನಿರೀಕ್ಷಾ ಎಂದು ಗುರುತಿಸಲಾಗಿದೆ.

ಮಂಗಳೂರಿನ ಕುದ್ಕೋರಿಗುಡ್ಡೆಯ ಮನೆಯೊಂದರಲ್ಲಿ ಉದ್ಯೋಗ ಮಾಡಿಕೊಂಡು ವಾಸವಾಗಿದ್ದ ಯುವತಿಯರ ಜೊತೆ ನಿರೀಕ್ಷಾ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಈ ವೇಳೆ, ತನ್ನ ಇಬ್ಬರು ರೂಮೇಟ್‌ಗಳ ಬಟ್ಟೆ ಬದಲಿಸುವ ದೃಶ್ಯಗಳನ್ನು ವಿಡಿಯೋ ಮಾಡಿ, ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಅಭಿಷೇಕ್ ಎಂಬಾತನಿಗೆ ಕಳುಹಿಸಿದ್ದಳು ಎಂದು ಆರೋಪಿಸಲಾಗಿದೆ.

ಕಾರ್ಕಳ ಆತ್ಮಹ*ತ್ಯೆ ಕೇಸ್‌ಗೆ ಹೊಸ ತಿರುವು:

ಈ ಪ್ರಕರಣವು ಕಾರ್ಕಳದಲ್ಲಿ ನಡೆದ ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿರುವುದು ತನಿಖೆಯ ವೇಳೆ ಬಯಲಾಗಿದೆ. ಕಳೆದ ಅಕ್ಟೋಬರ್ 9ರಂದು ಕಾರ್ಕಳದಲ್ಲಿ ಅಭಿಷೇಕ್ ಎಂಬ ಯುವಕ ಸುದೀರ್ಘ ಡೆತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡಿದ್ದ. ಆ ಡೆತ್ ನೋಟ್‌ನಲ್ಲಿ ಅಭಿಷೇಕ್, ನಿರೀಕ್ಷಾ ಹಾಗೂ ಇತರರ ವಿರುದ್ಧ 'ಹನಿಟ್ರ್ಯಾಪ್' ಆರೋಪ ಮಾಡಿದ್ದ. ಅಲ್ಲದೆ, ಅದೇ ಡೆತ್ ನೋಟ್‌ನಲ್ಲಿ ನಿರೀಕ್ಷಾ, ತನ್ನ ರೂಮಿನಲ್ಲಿದ್ದ ಇಬ್ಬರು ಯುವತಿಯರ ವಿಡಿಯೋ ಮಾಡಿ ವೈರಲ್ ಮಾಡಿದ್ದ ಬಗ್ಗೆಯೂ ಉಲ್ಲೇಖಿಸಿದ್ದನು. ಜೊತೆಗೆ, ಅಭಿಷೇಕ್ ಸಾಯುವ ಮುನ್ನ 'Truth Group' ಎಂಬ ವಾಟ್ಸಪ್ ಗ್ರೂಪ್ ಮಾಡಿ, ಅದರಲ್ಲಿ ಕೆಲ ವಿಡಿಯೋಗಳನ್ನು ಹರಿಬಿಟ್ಟಿದ್ದನು. ಆ ವಿಡಿಯೋಗಳಲ್ಲಿ ಬಂಧಿತ ನಿರೀಕ್ಷಾ ಮಾಡಿದ್ದ ಈ ಇಬ್ಬರು ಯುವತಿಯರ ವಿಡಿಯೋ ಕೂಡ ಸೇರಿತ್ತು.

ಪೊಲೀಸ್ ದೂರು ಮತ್ತು ಬಂಧನ: 

ವಿಡಿಯೋ ವೈರಲ್ ಆಗಿರುವ ಮಾಹಿತಿ ಗಮನಕ್ಕೆ ಬರುತ್ತಿದ್ದಂತೆಯೇ, ಸಂತ್ರಸ್ತ ಯುವತಿಯರು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಪೊಲೀಸರು, ತನಿಖೆ ನಡೆಸಿ ನಿರೀಕ್ಷಾಳನ್ನು ಬಂಧಿಸಿದ್ದಾರೆ. ನಿರೀಕ್ಷಾ ವಿರುದ್ಧ ಬಿಎನ್‌ಎಸ್ 77, 78(2), 294(2)(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ ಅಭಿಷೇಕ್ ಸಾವಿನ ಕುರಿತು ಉಡುಪಿಯ ಕಾರ್ಕಳ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದು, ನಿರೀಕ್ಷಾ ಕಳೆದ ಒಂದು ವರ್ಷದ ಹಿಂದೆ ಈ ವಿಡಿಯೋಗಳನ್ನು ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಅಭಿಷೇಕ್ ಆತ್ಮಹ*ತ್ಯೆ ಮತ್ತು ಯುವತಿಯರ ವಿಡಿಯೋ ವೈರಲ್ ಪ್ರಕರಣಗಳೆರಡೂ ಈಗ ಒಂದಕ್ಕೊಂದು ಬೆಸೆದುಕೊಂಡಿವೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more