ಮಂಡ್ಯ : ರಾತ್ರಿ ವೇಳೆ ರಸ್ತೆಯಲ್ಲಿ ಭಾರೀ ಗಾತ್ರದ ಮೊಸಳೆ ಓಡಾಟ

Sep 10, 2021, 3:29 PM IST

  ಮಂಡ್ಯ (ಸೆ.10):  ಭಾರೀ ಗಾತ್ರದ ಮೊಸಳೆಯೊಂದು‌ ರಾತ್ರಿ ವೇಳೆ ರಸ್ತೆಯಲ್ಲಿ ಕಾಣಿಸಿಕೊಂಡ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಬಳಿ ನಡೆದಿದೆ.  ಕಳೆದ 15 ದಿನಗಳಿಂದ ರಂಗನತಿಟ್ಟು ಪಕ್ಷಿಧಾಮದ ಬಳಿಯ ವಿರಿಜಾ ನಾಲೆಯಲ್ಲಿ ಮೊಸಳೆಯೊಂದು ಸೇರಿಕೊಂಡಿದ್ದು, ಈಗಾಗಲೇ ಮೂರ್ನಾಲ್ಕು ಕುರಿ ಮೇಕೆಗಳನ್ನು ಕೊಂದು ಹಾಕಿದೆ. 

ನದಿಯಲ್ಲಿ ಈಜುವಾಗ ಮೊಸಳೆ ದಾಳಿಯಿಂದ ರೈತ ಸಾವು

ಇದೀಗ ಮತ್ತೊಂದು ಭಾರೀ ಗಾತ್ರದ ಮೊಸಳೆ ವಿರಿಜಾ ನಾಲೆಯ ಪಕ್ಕದಲ್ಲೇ ರಾತ್ರಿ ವೇಳೆ ರೋಡಿಗೆ ಬಂದು ಆಹಾರಕ್ಕಾಗಿ ಅಲೆದಾಟು ನಡೆಸಿದ್ದು, ಪ್ರವಾಸಿಗರೊಬ್ಬರು ಕಾರಿನಲ್ಲಿ ಬರುವಾಗ ರಸ್ತೆಯಲ್ಲಿ ಮೊಸಳೆ ಸಂಚರಿಸಿವುದು ಕಂಡಿದೆ. ಆ ಪ್ರವಾಸಿಗರು ಮೊಸಳೆಯ ಓಡಾಟವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಮೊಸಳೆಗಳು ಪಕ್ಕದ ರಂಗನತಿಟ್ಟು ಪಕ್ಷಿಧಾಮದಿಂದ ಅಹಾರ ಅರಸಿ ಬಂದಿರಬೇಕು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದು ನದಿ ಬಿಟ್ಟು ನಾಲೆ ಮತ್ತು ಬಯಲಿಗೆ ಬಂದಿರೋ ಈ ಮೊಸಳೆಗಳ ಸೆರೆಗೆ ಬೋನ್ ಕೂಡ ಇಡಲಾಗಿದೆ.