ಕನ್ನಡದ ಮನೆಮನೆಗಳಲ್ಲೂ ನಗು ಉಕ್ಕಿಸಿದ್ದ ವರಲಕ್ಷ್ಮಿ! ಎಲ್ಲೆಲ್ಲೂ ಮಾರ್ದನಿಸುತ್ತಲೇ ಇರಲಿದೆ ಅಪರ್ಣಾ ಕಲರವ!

ಕನ್ನಡದ ಮನೆಮನೆಗಳಲ್ಲೂ ನಗು ಉಕ್ಕಿಸಿದ್ದ ವರಲಕ್ಷ್ಮಿ! ಎಲ್ಲೆಲ್ಲೂ ಮಾರ್ದನಿಸುತ್ತಲೇ ಇರಲಿದೆ ಅಪರ್ಣಾ ಕಲರವ!

Published : Jul 13, 2024, 05:01 PM IST

ಮಸಣದ ಹೂವಿಂದ ಮಜಾ ಟಾಕೀಸ್ ತನಕ..ಅಪರ್ಣಾ ಯಾನ!
ಕನ್ನಡದ ಮನೆಮಗಳು ಬೆಳೆದು ಬಂದ ಹಾದಿ ಹೇಗಿತ್ತು ಗೊತ್ತಾ..? 
ಕರುನಾಡಿನ ಹೆಮ್ಮೆಯ ಹೆಣ್ಣಿನ ಅಂತಿಮ ದಿನಗಳು ಹೇಗಿದ್ದವು..? 

ಅಪ್ಪಟ ಕನ್ನಡತಿಗೆ ಅಂತಿಮ ವಿದಾಯ ಹೇಳೋ ದುರಾದೃಷ್ಟ ನಮ್ಮ ಪಾಲಿಗೆ ಬಂದಿದೆ. ನಿರೂಪಕಿಯಾಗಿ ಮನೆಮಾತಾಗಿದ್ದ ಅಪರ್ಣಾ(Aparna) ಅವರ ಅನನ್ಯ ಸಾಧನೆ, ಒಂದೆರಡಲ್ಲ. ಮಸಣದ ಹೂವಿಂದ ಮಜಾ ಟಾಕೀಸ್ (Majaa Talkies) ತನಕ. ಅಪರ್ಣಾ ಅವರಿಲ್ಲದೆ ಕನ್ನಡ ಕಾರ್ಯಕ್ರಮಗಳು ಅಪೂರ್ಣ ಅನ್ನೋ ಮಾತು ಒಂದು ಕಾಲದಲ್ಲಿತ್ತು. ಆದ್ರೆ, ಈಗ ಕರುನಾಡು ಅಂಥಾ ಮಾತುಗಾರ್ತಿಯನ್ನ ಕಳ್ಕೊಂಡಿದೆ. ನಿಜಕ್ಕೂ ಇದು ಕನ್ನಡಿಗರ ಪಾಲಿಗೆ ದೊಡ್ಡ ನಷ್ಟವೇ. ಮಹಾಮಾರಿ ಕ್ಯಾನ್ಸರ್‌ಗೆ ಅಚ್ಚ ಕನ್ನಡದ ನಿರೂಪಕಿ ಅಪರ್ಣ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಶ್ವಾಸಕೋಶ ಕ್ಯಾನ್ಸರ್‌ನಿಂದ(Lung Cancer) ಬಳಲ್ತಾ ಇದ್ರು ಅಪರ್ಣ. ಕಡೆಗೆ, ಆ ಹೋರಾಟ ಮಾಡುತ್ತಾ ಮಾಡುತ್ತಲೇ, ಇಹಲೋಕ ತ್ಯಜಿಸಿದ್ದಾರೆ. ಅಪರ್ಣಾ ರಾಜ್ಯದ ಜನಕ್ಕೆ ಪರಿಚಯವಾಗಿದ್ದೇನೋ ಸಿನಿಮಾ ಮೂಲಕ. ಆದ್ರೆ ಅವರನ್ನ ಜನರ ಹತ್ತಿರಕ್ಕೆ ಕರೆದುಕೊಂಡು ಬಂದಿದ್ದು ಮಾತ್ರ, ಕಿರುತೆರೆ. ತಮ್ಮ ಮಾತಿನ ಮೂಲಕ, ಮಾತಿನ ಶೈಲಿಯ ಮೂಲಕ, ಹುಳುಕಿಲ್ಲ ಸುಲಲಿತ, ಸುಮಧುರ, ಅಸ್ಖಲಿತ ಕನ್ನಡದ ಮೂಲಕ, ಮನೆಮಾತಾದ್ರು ಅಪರ್ಣಾ. ಅಪರ್ಣಾ ವೇದಿಕೆ ಮೇಲೆ ಹತ್ತಿ ಮೈಕ್ ಮುಂದೆ ನಿಂತು ಮಾತಾಡ್ತಾ ಇದಾರೆ ಅಂದ್ರೆ, ಎಂಥಾ ಕಾರ್ಯಕ್ರಮಕ್ಕೂ ಸಾಂಸ್ಕೃತಿಕ ಮೆರುಗು ತಾನೇ ತಾನಾಗಿ ಬಂದುಬಿಡುತ್ತಿತ್ತು.

ಇದನ್ನೂ ವೀಕ್ಷಿಸಿ:  Chaddi gang : ಮಳೆಗಾಲ ಬರ್ತಿದ್ದಂತೆ ಆ್ಯಕ್ಟೀವ್ ಚಡ್ಡಿ ಗ್ಯಾಂಗ್ ! ರಾಬರಿ ಗ್ಯಾಂಗ್‌ನ ಭರ್ಜರಿ ಬೇಟೆ ಹೇಗಿತ್ತು ಗೊತ್ತಾ?

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more