Kodagu: 4 ಕೋಟಿ ರೂಪಾಯಿ ಖರ್ಚಾದ್ರೂ ಪೂರ್ಣವಾಗದ ಮಡಿಕೇರಿ ಸ್ಕ್ವೇರ್

Kodagu: 4 ಕೋಟಿ ರೂಪಾಯಿ ಖರ್ಚಾದ್ರೂ ಪೂರ್ಣವಾಗದ ಮಡಿಕೇರಿ ಸ್ಕ್ವೇರ್

Published : Mar 28, 2022, 01:29 PM IST

ಕಳೆದ ನಾಲ್ಕು ವರ್ಷಗಳಿಂದ  ಭೀಕರ ಪ್ರವಾಹ (Flood) ಮತ್ತು ಭೂಕುಸಿತದಿಂದ (Land Slide) ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಇದೇ ಪ್ರವಾಹ ಪರಿಸ್ಥಿತಿ ನಮ್ಮ ಅಧಿಕಾರಿಗಳು ಜನ ಪ್ರತಿನಿಧಿಗಳ ಪಾಲಿಗೆ ಹಬ್ಬವಾಗಿದೆ. 

ಕೊಡಗು (ಮಾ. 28):  ಕಳೆದ ನಾಲ್ಕು ವರ್ಷಗಳಿಂದ  ಭೀಕರ ಪ್ರವಾಹ (Flood) ಮತ್ತು ಭೂಕುಸಿತದಿಂದ (Land Slide) ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಇದೇ ಪ್ರವಾಹ ಪರಿಸ್ಥಿತಿ ನಮ್ಮ ಅಧಿಕಾರಿಗಳು ಜನ ಪ್ರತಿನಿಧಿಗಳ ಪಾಲಿಗೆ ಹಬ್ಬವಾಗಿದೆ. ಯಾಕಂದ್ರೆ ಪರಿಹಾರ ಕಾಮಗಾರಿಗಳ ಇಂದಿನ ಪರಿಸ್ಥಿತಿ, ಮತ್ತು ಹಣದ ಪೋಲು ನೋಡಿದಾಗ ನಾವೆಂಥ ಭ್ರಷ್ಟರ ವ್ಯವಸ್ಥೆಯಲ್ಲಿದ್ದೇವೆ ಅಂತ ಜನರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.

ನೀವೊಮ್ಮೆ ಮಡಿಕೇರಿ (Madikeri)ನಗರದ ಹೃದಯ ಭಾಗಕ್ಕೆ ಎಂಟ್ರಿ ಕೊಟ್ಟರೆ ಒಮ್ಮೆಗೇ ಗಾಬರಿ ಬೀಳ್ತೀರಾ. ಯಾಕಂದ್ರೆ ಹೃದಯ ಭಾಗದಲ್ಲಿರೋ ಸಿಮೆಂಟಿನ ರಕ್ಕಸ ಕಟ್ಟೆಯೊಂದು ಮುಖಕ್ಕೆ ರಾಚುವಂತಿದೆ. ಯಾವುದೋ ಬೃಹತ್ ಅಣೆಕಟ್ಟಿನ ಮಾದರಿ ಇದು ಎಂಬಂತೆ ಗೋಚರಿಸುತ್ತಿದೆ. ಇಡೀ ನಗರವನ್ನೇ ವಿಕಾರ ಮಾಡಿರೋ ಈ ಕಟ್ಟಡ ಬೇರೇನೂ ಅಲ್ಲ, ಬಹುಕೋಟಿ ವೆಚ್ಚದ ತಡೆ ಗೋಡೆ. ಹೌದು, ಈ ಹಿಂದೆ ಇಲ್ಲಿ ಖಾಸಗಿ ಬಸ್ ನಿಲ್ದಾಣವಿತ್ತು. ಆದ್ರೆ 2018ರಲ್ಲಿ ಇಲ್ಲಿ ಭೂ ಕುಸಿತವಾಗಿ ಅನಾಹುತ ಸಂಭವಿಸಿತ್ತು. ಹಾಗಾಗಿ ಬಸ್ ನಿಲ್ದಾಣ ತೆರವುಗೊಳಿಸಿ ಇಲ್ಲಿ ತಡೆಗೋಡೆ  ಮಾಡಲು ನಿರ್ಧರಿಸಲಾಯಿತು.

ತಡೆ ಗೋಡೆ ಜೊತೆಗೆ ಇಲ್ಲೊಂದು ಮಡಿಕೇರಿ ಸ್ಕ್ವೇರ್ ಹೆಸರಲ್ಲಿ ಆಕರ್ಷಕ ಪ್ರವಾಸೀ ತಾಣ ಮಾಡಲೂ ಯೋಜನೆ ಹಾಕಿ ಇದಕ್ಕಾಗಿ ಒಂದು ಕೋಟಿ ರೂ ಬಿಡುಗಡೆಯೂ ಆಯಿತು. ಆದ್ರೆ ಕಾಮಗಾರಿ ಮಾತ್ರ ಕಳೆದ ಮೂರು ವರ್ಷಗಳಿಂದ ನಡೆಯುತ್ತಲೇ ಇದೆ. ಒಂದು ಕೋಟಿ ರೂಪಾಯಿ ಇದ್ದ ಕಾಮಗಾರಿ ವೆಚ್ಚ ಇದೀಗ 4 ಕೋಟಿ 30 ಲಕ್ಷ ರೂಪಾಯಿಗೆ ಏರಿದೆ. ಆದ್ರೂ ತಡೆಗೋಡೆ ಸಂಪೂರ್ಣವಾಗಿಲ್ಲ. ಸಾರ್ವಜನಿಕರ ತೆರಿಗೆ ಹಣ ನೀರಿನಂತೆ ಇಲ್ಲಿ ಪೋಲಾಗುತ್ತಿದೆ. ಇದನ್ನು ಕೇಳುವವರು ಮಾಡುವವರು ಇಲ್ಲವಾಗಿದ್ದಾರೆ.

ವಿಪರ್ಯಾಸ ಅಂದ್ರೆ ಮಳೆ ಹಾನಿ ಕಾಮಗಾರಿ ಹೆಸರಿನಲ್ಲಿ 4 ಕೋಟಿ ರೂಪಾಯಿ ಖರ್ಚಾದ್ರೂ ಮಡಿಕೇರಿ ಸ್ಕ್ವೇರ್ ಸಂಪೂರ್ಣವಾಗಿಲ್ಲ. ಅದರ ಬದಲು ಇದನ್ನು ಮಡಿಕೇರಿ ಸ್ಕ್ವೇರ್ ಮಾಡುವ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ಇನ್ನೇನಿದ್ದರೂ ಇದು ವಿಕಾರ ತಡೆಗೋಡೆಯಾಗಿ ಹಾಗೇ ಉಳಿಯಲಿದೆ. ಇದರ ಉಸ್ತುವಾರಿ ಹೊತ್ತಿರೋ ಮಡಿಕೇರಿ ನಗರ ಸಭೆ ಅಧಿಕಾರಿಗಳಿಗೂ ಕೂಡ ಇಲ್ಲಿ ಏನು ನಡೆಯುತ್ತಿದೆ ಅನ್ನೋದು ತಿಳಿಯುತ್ತಿಲ್ಲವಂತೆ. ಹೀಗಾಗಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಈ ಸ್ಥಳದ ಸೌಂದರ್ಯ ಹೆಚ್ಚಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಒಂದು ಸರಳವಾದ ಮಹತ್ವಾಕಾಂಕ್ಷಿ ಯೋಜನೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೇಗೆ ಹಳ್ಳ ಹಿಡಿಯುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಮಾತ್ರವಲ್ಲ, ಜನರು ಕಷ್ಟಪಟ್ಟು ಸಂಪಾದಿಸಿ ತೆರಿಗೆ ನೀಡಿದ ಹಣ ಈ ಭ್ರಷ್ಟರ ಹೊಟ್ಟೆಯನ್ನ ಹೇಗೆ ತುಂಬಿಸುತ್ತದೆ ಅನ್ನೋದಕ್ಕೂ ಇದೊಂದು ಉತ್ತಮ ಉದಾಹರಣೆಯಾಗಿದೆ ಅಂತ ನಾಗರಿಕರು ವಿಷಾದ ವ್ಯಕ್ತಪಡಿಸುತ್ತಾರೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more