ಬಡ್ಡಿ ದಂಧೆಯ ಕರಾಳ ಮುಖ ಬಯಲು! ಪೊಲೀಸರೇ ನಡೆಸ್ತಾರಾ ಬಡ್ಡಿ ದಂಧೆ?

Dec 22, 2024, 9:03 PM IST

ಕವರ್ ಸ್ಟೋರಿ ಕ್ಯಾಮರಾದಲ್ಲಿ ಬಡ್ಡಿ ಮಾಫಿಯಾ ಸೆರೆ. 10ರಿಂದ 30 ಪರ್ಸೆಂಟೇಜ್​ವರೆಗೂ ಬಡ್ಡಿ. ಒಮ್ಮೆ ಬಡ್ಡಿ ಸಾಲ ಮಾಡಿದ್ರೆ ಮುಗೀತು ಜೀವನ. ಬಡ್ಡಿ ಮಾಫಿಯಾ ಎಲ್ಲೆಲ್ಲಿದೆ ಗೊತ್ತಾ? ಬಡ್ಡಿದಂಧೆಗೆ ಬಲಿಯಾದವರು ಎಷ್ಟು ಗೊತ್ತಾ? ಬಡವರ ಕಷ್ಟವೇ ಈ ಮಾಫಿಯಾದ ಬಂಡವಾಳ. ಬೆಂಗಳೂರಿನ ಸಿಟಿ ಮಾರ್ಕೆಟ್​ನಲ್ಲಿ ಭರ್ಜರಿ ವ್ಯವಹಾರ. ಬೆಳಿಗ್ಗೆ 10 ಸಾವಿರ, ಸಂಜೆ 12 ಸಾವಿರ ಕೊಡಬೇಕು. 

ಬಡ್ಡಿ ಮಾಫಿಯಾದಿಂದ ಅದೆಷ್ಟೋ ಮಂದಿ ಊರು ಬಿಟ್ಟಿದ್ದಾರೆ.  ನೂರಾರು ಜನ ಸತ್ತು ಹೋಗಿದ್ದಾರೆ. ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳಲ್ಲೂ ಈ ಮಾಫಿಯಾ ಬೇರೂರಿಬಿಟ್ಟಿದೆ. 

ಒಂದು ಸಲ ಈ ಬಡ್ಡಿ ದಂಧೆಕೋರರಿಂದ ಸಾಲ ತಗೊಂಡ್ರೆ, ಅದು ಮುಗಿಯೋದೇ ಇಲ್ಲ. ಬಡ್ಡಿ ಅಸಲು ಎಲ್ಲಾ ಕಟ್ಟಿದ್ರೂ, ನಿಮಗೆ ಅವರು ಕೊಟ್ಟಿರೋ ಸಾಲ ಮುಗಿಯೋದೇ ಇಲ್ಲ. ಅಷ್ಟರ ಮಟ್ಟಿಗೆ ನಿಮ್ಮನ್ನ ಹಿಂಸಿಸುತ್ತಾರೆ. ಜೊತೆಗೆ ನಿಮ್ಮನ್ನ ಕೊರ್ಟು ಪೊಲೀಸ್ ಸ್ಟೇಷನ್ ಅಂತೆಲ್ಲಾ ಅಲೆಸುತ್ತಾರೆ. ನಿಮ್ಮ ಮನೆ ಮಠ ಮಾರಿಕೊಳ್ಳೋವರೆಗೂ ನಿಮ್ಮನ್ನ ಅವರು ಬಿಡಲ್ಲ!

ದುರಂತ ಅಂದ್ರೆ, ಕೆಲವು ಸರ್ಕಾರಿ ಅಧಿಕಾರಿಗಳೇ ಬಡ್ಡಿ ದಂಧೆ ನಡೆಸ್ತಾರೆ. ಇನ್ನೂ ಕೆಲವರು ಬಡ್ಡಿದಂಧೆಕೋರರ ಜೊತೆ ಶಾಮೀಲಾಗಿ ಬೇನಾಮಿಯಾಗಿ ಬಡ್ಡಿ ದಂಧೆ ನಡೆಸುತ್ತಿದ್ದಾರೆ.  ಸರ್ಕಾರ ಇದರ ಬಗ್ಗೆ ಒಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.