Oct 10, 2020, 11:33 AM IST
ರಾಯಚೂರು(ಅ.10): ಸತತ ಮಳೆಯಿಂದ ಮನೆಯೊಳಗೆ ಭೂಮಿ ಕುಸಿಯುತ್ತಿರುವ ಘಟನೆ ಜಿಲ್ಲೆ ದೇವದುರ್ಗ ತಾಲೂಕಿನ ಮಸೀದಪುರ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಭೂಮಿ ಕುಸಿಯುತ್ತಿರುವುದರಿಂದ ಹೂತ ಮಂಚ, ಪಾತ್ರೆ ಪಗಡೆಗಳು ಹಾಗೂ ದವಸ ಧಾನ್ಯಗಳು ಬೀಳುತ್ತಿವೆ.
ಲೈವ್ ವರದಿ ನಡುವೆ ಗಾಯಾಳು ನೆರವಿಗೆ ಧಾವಿಸಿದ ಏಷ್ಯಾನೆಟ್ ನ್ಯೂಸ್ ಪತ್ರಕರ್ತ!
ಮನೆಯೊಳಗಿನ ನೆಲ ಕುಸಿಯುತ್ತಿರುವುದರಿಂದ ಜನರು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ. ಇಡೀ ಗ್ರಾಮ ತಗ್ಗು ಪ್ರದೇಶದಲ್ಲಿರೋದ್ರಿಂದ ಇಲ್ಲಿನ ಮನೆಗಳು 18-20 ಅಡಿ ಕುಸಿಯುತ್ತಿವೆ. ಗ್ರಾಮದಲ್ಲಿನ 500 ಮನೆಗಳಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳು ಕುಸಿತ ಕಂಡಿವೆ. ಕಳೆದ ಹತ್ತು ವರ್ಷಗಳಿಂದ ಮನೆಗಳು ಕುಸಿಯುತ್ತಿವೆ.