Raichur Ksheera Bhagya Scam: ಶಾಲೆಗಳ ನಕಲಿ ದಾಖಲೆ ಸೃಷ್ಟಿಸಿ ಹಾಲಿನ ಪುಡಿ ಗುಳಂ!

Raichur Ksheera Bhagya Scam: ಶಾಲೆಗಳ ನಕಲಿ ದಾಖಲೆ ಸೃಷ್ಟಿಸಿ ಹಾಲಿನ ಪುಡಿ ಗುಳಂ!

Published : Feb 11, 2022, 12:00 PM IST

*ಕ್ಷೀರಭಾಗ್ಯ ಯೋಜನೆಯಲ್ಲಿ ಭಾರೀ ಗೋಲ್ಮಾಲ್!
*ಶಾಲೆಗಳ ನಕಲಿ ದಾಖಲೆಗಳು ಸೃಷ್ಟಿಸಿದ ಗುತ್ತಿಗೆದಾರ!
*14 ಶಾಲೆಗಳ ನಕಲಿ ಸಹಿ ಮಾಡಿ ಹಾಲಿನ ಪುಡಿ ಗುಳಂ!
*ಬಡಮಕ್ಕಳ ಹೊಟ್ಟೆ ಮೇಲೆ ಹೊಡೆದ ಗುತ್ತಿಗೆದಾರ
*ಗುತ್ತಿಗೆದಾರನ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲು

ರಾಯಚೂರು (ಫೆ. 11):  ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನ ಕಡಿಮೆ ಮಾಡಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಯೋಜನೆಯಂತೆ ಶಾಲೆಗೆ ಬರುವ ಬಡ ಮಕ್ಕಳಿಗೆ ಕೆಎಂಎಫ್ ನೀಡುವ ಕೆನೆಭರಿತ ಹಾಲು ವಿತರಣೆ ಮಾಡುತ್ತಾರೆ. ಮಕ್ಕಳ ಹಾಲಿನ ಪುಡಿಯೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ ಆಕಾಶ್ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಒಟ್ಟು 14 ಶಾಲೆಗಳಿಗೆ ವಿತರಣೆ ಮಾಡಬೇಕಾದ 1,768 ಕೆಜಿ  ಹಾಲಿನ ಪುಡಿ ಗುಳಂ ಮಾಡಿದ್ದಾನೆ. 

ಇದನ್ನೂ ಓದಿ: Raichur: ಸೆಲ್ಕೋಯಿಂದ 252 ಆರೋಗ್ಯ ಕೇಂದ್ರಗಳಿಗೆ ಸೋಲಾರ್

ಸುಮಾರು 5 ಲಕ್ಷ 10 ಸಾವಿರ 510 ರೂ. ಮೌಲ್ಯದ ಹಾಲಿನ ಪುಡಿ ನುಂಗಿದ ಗುತ್ತಿಗೆದಾರ ಆಕಾಶ್ ಎಂ.ಗಾಣಗಿ. ಶಾಲೆಗಳ ನಕಲಿ ಮೊಹರ ಮತ್ತು 14 ಶಾಲೆಗಳ ಮುಖ್ಯಗುರುಗಳ ನಕಲಿ ಸಹಿ ಮಾಡಿ ಹಾಲಿನ ಪುಡಿ ವಿತರಣೆ ಮಾಡಿರುವುದಾಗಿ ಶಿಕ್ಷಣ ಇಲಾಖೆಗೆ ಹಾಗೂ ಕೆಎಂಎಫ್ಗೆ ದಾಖಲೆಗಳು ಕೂಡ ಸಲ್ಲಿಕೆ ಮಾಡಿದ್ದಾನೆ. ಇತ್ತ ಗುತ್ತಿಗೆದಾನ ನಡೆ ಬಗ್ಗೆ ಅನುಮಾನ ಬಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ಹಾಲಿನ ಪುಡಿ ಬಗ್ಗೆ ವಿಚಾರಣೆ ಮಾಡಿದ್ದಾಗ ಗುತ್ತಿಗೆದಾರ ಆಕಾಶ.ಎಂ.ಗಾಣಗಿಯ ನಿಜಬಣ್ಣ ಬಯಲಾಗಿದೆ. ಈ ಕುರಿತ ವರದಿ ಇಲ್ಲಿದೆ. 

23:36ಮಂತ್ರಾಲಯ ಸೀತಾಪಹರಣ ಕೇಸ್‌, ಬಾಡಿಯೇ ಸಿಗದ ಕೇಸ್‌ನಲ್ಲಿ ನ್ಯಾಯದಾನ ಮಾಡಿದ ಕೋರ್ಟ್‌
25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
Read more