ಕೋಲಾರದಲ್ಲಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ: ಜಿಲ್ಲೆಯಾದ್ಯಂತ 144 ಸೆಕ್ಷನ್‌ ಜಾರಿ

Apr 9, 2022, 12:04 PM IST

ಕೋಲಾರ (ಏ. 09): ನಗರದಲ್ಲಿ ನಡೆದ ಶ್ರೀರಾಮ ಶೋಭಾಯಾತ್ರೆ ಪಲ್ಲಕ್ಕಿಯಲ್ಲಿನ 16 ಅಡಿಗಳ ಶ್ರೀರಾಮ ದೇವರ ವಿಗ್ರಹಕ್ಕೆ ಕೆಲ ಕಿಡಿಗೇಡಿಗಳು ಸೋಮೇಶ್ವರ ಪಾಳ್ಳದ ಬಳಿ ಶ್ರೀನಿವಾಸಪುರ ವೃತ್ತದ ಬಳಿ  ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ.

ಗೇಟ್‌ಪಾಸ್ ಭೀತಿ: ಅಮಿತ್ ಶಾ ಗಮನ ಸೆಳೆಯಲು ಪೈಪೋಟಿಗೆ ಬಿದ್ದ ಬಿಜೆಪಿ ಸಚಿವರು

 ಶ್ರೀರಾಮ ಶೋಭಾಯಾತ್ರೆ ಮೆರವಣಿಗೆ ಪ್ರಾರಂಭವಾಗಿ ಮುತ್ಯಾಲಪೇಟೆ ಮೂಲಕವಾಗಿ ಬಜಾರು ಬೀದಿಯುದ್ದಕ್ಕೂ ಹೊರಟ ಮೆರವಣಿಗೆ ವಿಠಲೇಶ್ವರಪಾಳ್ಳದಿಂದ ಜಹಾಂಗೀರ್‌ ಮೊಹಲ್ಲ ಮುಂಭಾಗದಲ್ಲಿ ಹಾದು ವಿರೂಪಾಕ್ಷಿ ರಸ್ತೆಗೆ ಹೋಗುವ ಸಂದರ್ಭದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಆಗ ಕೆಲ ಕಿಡಿಗೇಡಿಗಳು ಶ್ರೀರಾಮ ಪ್ರತಿಮೆಗೆ ಕಲ್ಲುಗಳನ್ನು ತೂರಿದ್ದಾರೆ. ಅನ್ಯ ಕೋಮಿಗೆ ಸೇರಿದ ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದಾಗಿ ಹೇಳಲಾಗುತ್ತಿದೆ. ಕಲ್ಲು ತೂರಾಟ ಆರಂಭವಾಗುತ್ತಿದ್ದಂತೆ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಎರಡೂ ಸಮುದಾಯದ ಜನರನ್ನು ಚದುರಿಸಿದ ಕಾರಣ ಗಲಭೆ ತಣ್ಣಗಾಯಿತು. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.