Jun 11, 2022, 8:29 AM IST
ಕೊಡಗು ಜಿಲ್ಲೆಯ ಜನರು ಕಾಡಾನೆಗಳ (Wild Elephant) ಹಾವಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಅರ್ಥವಾಗದೆ ಅಸಹಾಯಕರಾಗಿ ಕುಳಿತಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಅರಣ್ಯ ಇಲಾಖೆ (Forest Department) ಹಳೆಯ ಒಂದು ಐಡಿಯಾವನ್ನೆ ಹೊಸದಾಗಿ ಜಾರಿಗೆ ತರಲು ಹೊರಟಿದೆ. ಅದೇನೆಂದ್ರೆ ಆನೆಗಳ ಚಲನವಲನ ಟ್ರ್ಯಾಕ್ ಮಾಡ್ಲಿಕ್ಕೆ ಅಂತ ರೇಡಿಯ ಕಾಲರ್ (Radio caller) ಅಳವಡಿಸುವುದು. ಆದ್ರೆ ಇದಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊಡಗು ಜಿಲ್ಲೆಯಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 300 ಕಾಡಾನೆಗಳಿವೆ. ಬಹುತೇಕ ಕಾಡಾನೆಗಳು ಕಾಫಿ ತೋಟ ಮತ್ತು ಗದ್ದೆಗಳನ್ನೆ ತಮ್ಮ ವಾಸಸ್ಥಾನವನ್ನಾಗಿಸಿಕೊಂಡಿವೆ. ಹಾಗಾಗಿ ಆನೆ ಪೀಡಿತ ಪ್ರದೇಶಗಳಲ್ಲಿ ಬೆಳೆಗಾರರಿಗೆ ಕಾಫಿ, ಬಾಳೆ, ಅಡಿಕೆ, ತೆಂಗು, ಭತ್ತ ಯಾವ ಬೆಳೆಯೂ ಕೈಗೆ ಸಿಗುತ್ತಿಲ್ಲ. ಎಷ್ಟೋ ಕಡೆಗಳಲ್ಲಿ ರೈತರು ಕೃಷಿ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಅದೂ ಅಲ್ಲದೆ ಆನೆಗಳ ಚಲನವಲನ ಅರಿಯಕಾಗದೆ ಎಷ್ಟೋ ಕಾರ್ಮಿಕರು, ಜನರು ಕೂಡ ಆನೆ ದಾಳಿಗೆ ಬಲಿಯಾಗಿದ್ದಾರೆ.
ಕೊಡಗು: ಬೈಗುಳದ ಹಬ್ಬ, ಕಾಡಿನ ಮಕ್ಕಳು ಆಚರಣೆ ಮಾಡುವ ವಿಶಿಷ್ಟ ಹಬ್ಬ
ಹಾಗಾಗಿ ಅರಣ್ಯ ಇಲಾಖೆ ಕೆಲವು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಮುಂದಾಗಿದೆ. ಪ್ರತಿಯೊಂದು ಆನೆಯ ಗುಂಪಿನಲ್ಲಿ ನಾಯಕ ಅಥವಾ ನಾಯಕಿ ಆನೆಯೊಂದಿರುತ್ತದೆ. ಅಂತಹ ಲೀಡರ್ ಆನೆಯನ್ನ ಗುರುತಿಸಿ ಅದಕ್ಕೆ ರೇಡಿಯೋ ಕಾಲರ್ ಅಳವಡಿಸಲು ನಿರ್ಧರಿಸಲಾಗಿದೆ. ಈ ರೀತಿ ಮಾಡುವುದರಿಂದ ಆನೆಗಳ ಚಲನವಲನ ಕಂಡು ಹಿಡಿಯುವುದು ಸಾರ್ವಜನಿಕರಿಗೆ ಮಾಹಿತಿ ನಿಡಲು ಅನುಕೂಲವಾಗುತ್ತದೆ.
ಆದ್ರೆ ಅರಣ್ಯ ಇಲಾಖೆ ತಿರ್ಮಾನಕ್ಕೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಯಾಕಂದ್ರೆ ರೇಡಿಯೋ ಕಾಲರ್ ಅಳವಡಿಸಲು ನಿರ್ಧರಿಸಿರುವುದು ಕೇವಲ ನಾಲ್ಕು ಆನೆಗಳಿ ಮಾತ್ರ. ಆದ್ರೆ ಕೊಡಗಿನಲ್ಲಿ ನೂರಾರು ಆನೆಗಳಿವೆ. ಹತ್ತಾರು ಗುಂಪುಗಳಿವೆ. ನಾಲ್ಕು ಆನೆಗಳಿಗೆ ಇದನ್ನು ಅಳವಡಿಸುವುದರಿಂದ ಎಲ್ಲಾ ಆನೆಗಳ ಚಲನವಲನ ಗುರುತಿಸಲಾಗುವುದಿಲ್ಲ. ಅದೂ ಅಲ್ಲದೆ, ರೇಡಿಯೋ ಕಾಲರ್ ಅಳವಡಿಕೆಯಿಂದ ಆನೆಗಳನ್ನು ಗುರುತಿಸಿ ಅವುಗಳನ್ನು ಅತ್ತಿಂದಿತ್ತ ಓಡಿಸಬಹುದಷ್ಟೆ. ಆದ್ರೆ ಕಾಡು ನಾಡು ಸಂಘರ್ಷ ತಪ್ಪಿಸಲಾಗುವುದಿಲ್ಲ ಎಂಬ ಅಭಿಪ್ರಾಯವಿದೆ.