Kodagu: ಹೆಮ್ಮೆಯ ಕನ್ನಡಿಗ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪಗೆ ಭಾರತ ರತ್ನಕ್ಕಾಗಿ ಅಭಿಯಾನ

Kodagu: ಹೆಮ್ಮೆಯ ಕನ್ನಡಿಗ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪಗೆ ಭಾರತ ರತ್ನಕ್ಕಾಗಿ ಅಭಿಯಾನ

Published : Mar 08, 2022, 11:44 AM IST

*  ಯುವಕರ ಪಾಲಿಗೆ ಸ್ಫೂರ್ತಿಯ ವ್ಯಕ್ತಿತ್ವ
* ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಆಕ್ರೋಶ 
*  ಪೋಸ್ಟರ್ ಅಂಟಿಸಲು ಅನುಮತಿ ಪಡೆಯದ ಕಾಂಗ್ರೆಸ್
 

ಕೊಡಗು(ಮಾ.08):  ಫೀಲ್ಡ್ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಭಾರತ ಸೈನ್ಯದ ಪ್ರಪ್ರಥಮ ಫೀಲ್ಡ್ ಮಾರ್ಷಲ್‌. ಮಹಾದಂಡನಾಯಕ ಕೆ.ಎಂ. ಕಾರ್ಯಪ್ಪ ಭಾರತೀಯರ ಜನಮನದಲ್ಲಿ ಎಂದೆಂದಿಗೂ ಅಮರ. ಇವರು ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.  ಭಾರತೀಯ ಸೇನೆಯಲ್ಲಿ ಅತ್ಯುನ್ನತ ಪದವಿ ಗಳಿಸಿದ್ದ ಇವರು ಶಿಸ್ತು, ಆದರ್ಶಕ್ಕೆ ಹೆಸರಾಗಿದ್ದರು. ಈ ಕಾರಣದಿಂದಲೇ ಅವರು ಕೊಡಗಿನ ಮಂದಿಗಷ್ಟೇ ಅಲ್ಲ; ಎಲ್ಲ ಯುವಕರ ಪಾಲಿಗೆ ಸ್ಫೂರ್ತಿಯ ವ್ಯಕ್ತಿತ್ವವಾಗಿದ್ದರೆ. ಇವರ ಸೇನೆಯ ಬದುಕಿನ ರೋಚಕ ಕ್ಷಣಗಳು ರೋಮಾಂಚನಗೊಂಡು ನಮ್ಮಲ್ಲೊಂದು ಕಿಡಿ ಹಚ್ಚುವಂತೆ ಮಾಡುತ್ತದೆ. 

ಇಂಥ ಮಹಾನ್‌ ನಾಯಕನಿಗೆ ಭಾರತದ ಸರ್ವಶ್ರೇಷ್ಠ ಭಾರತ ರತ್ನ ಪ್ರಶಸ್ತಿ ಸಿಗಬೇಕು ಎಂದು ಕೊಡಗಿನ ಜನರ ಹಲವು ವರ್ಷದ ಬೇಡಿಕೆಯಾಗಿದೆ. ದೇಶದ ಮೊಟ್ಟ ಮೊದಲ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಬೇಕು ಎಂದು ಕೊಡಗು ಜಿಲ್ಲೆಯಲ್ಲಿ ಇದೀಗ ಕಾಂಗ್ರೆಸ್ ಪಕ್ಷ ಹೊಸ ಅಭಿಯಾನ ಶುರುಮಾಡಿದೆ. ಜಿಲ್ಲೆಯಾದ್ಯಂತ ಕಾಂಗ್ರೆಸ್ ವಕ್ತಾರ ಬ್ರಿಜೆಶ್ ಕಾಳಪ್ಪ ಅವರ  ಭಾವಚಿತ್ರವಿರುವ ಪೋಸ್ಟರ್ ನಲ್ಲಿ ಕಾರ್ಯಪ್ಪ ಅವರಿಗೆ ಭಾರತ ರತ್ನ ಯಾಕೆ ನೀಡಿಲ್ಲ ಅಂತ ಪ್ರಶ್ನೆ ಮಾಡಲಾಗಿದೆ. 

Vijaypura: ಇಲ್ಲಿನ ದೇವರಿಗೆ ನೈವೇದ್ಯಕ್ಕೆ ಸಾರಾಯಿನೇ ಬೇಕು: ಎಣ್ಣೆ ಇಲ್ದೆ ಏನೂ ಇಲ್ಲ..!

ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಕಾರ್ಯಪ್ಪನವರಿಗೆ ಭಾರತ ರತ್ನ ನೀಡಬೇಕೆಂದು ಅಭಿಯಾನ ಮಾಡುವ ಮೂಲಕ ಅವರಿಗೆ ಅವಮಾನ ಮಾಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗಿನ ಮನೆ ಮನೆಗಳಲ್ಲಿ ಆರಾಧಿಸಲ್ಪಡುವ ಕಾರ್ಯಪ್ಪ ಅವರ ಭಾವಚಿತ್ರ ಇಲ್ಲಿ ಕಂಡವರ ಕಾಲ ಕಸವಾಗುತ್ತಿದೆ. ಕೊಡಗಿನ ಹಲವು ಬಸ್ ನಿಲ್ದಾಣಗಳಲ್ಲಿ ಕಾರ್ಯಪ್ಪ ಅವರ ಭಾವಚಿತ್ರ ಇರೋ ದೊಡ್ಡ ಪೋಸ್ಟರ್ ಅಂಟಿಸಲಾಗಿದೆ. ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ ಹೀಗೆ ಪೋಸ್ಟರ್ ಹಾಕುವ ಮೊದಲು ಸಂಬಂಧ ಪಟ್ಟ ಸ್ಥಳೀಯಾಡಳಿತದಿಂದ ಅನುಮತಿ ಪಡೆಯಬೇಕಾಗುತ್ತದೆ. ಆದ್ರೆ ಪೋಸ್ಟರ್ ಅಂಟಿಸಿದವರು ಅಂತಹ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಈ ಪೋಸ್ಟರ್ಗಳನ್ನು  ಯಾರು ಯಾರೋ ಹರಿದು ಹಾಕಿದ್ದು ಬೇಕಾಬಿಟ್ಟಿ ಕಸವಾಗಿ ಬೀದಿಯಲ್ಲಿ ಎಸೆಯಲ್ಪಟ್ಟಿರುವುದನ್ನು  ಗಮನಿಸಿದ  ಸ್ಥಳೀಯರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ಕೇಳಲು ಬಸ್ ನಿಲ್ದಾಣಗಳು ವೇದಿಕೆಯಲ್ಲ. ಅದಕ್ಕೆ ಅದರದ್ದೇ ಆದ ವೇದಿಕೆ ಇದೆ. ಅಂತಹ ಉನ್ನತ ಸ್ಥಳದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಗ್ರಹ ಮಾಡಬೇಕೇ ಹೊರತು ಹೀಗೆ ಪೋಸ್ಟರ್ ಹಾಕಿ ಅಲ್ಲ ಅಂತ ಸ್ಥಳೀಯರು ಟೀಕಿಸುತ್ತಿದ್ದಾರೆ. 
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more