ಸೋಮವಾರಪೇಟೆ ಮೂವತ್ತೊಕ್ಲು ಗ್ರಾಮದಲ್ಲಿದೆ ಮೀನುಕೊಲ್ಲಿ, ಆದ್ರೆ ಹಿಡಿಯುವಂತಿಲ್ಲ.!

Sep 10, 2021, 3:39 PM IST

ಕೊಡಗು (ಸೆ. 10): ಸಣ್ಣ ತೊರೆಯಲ್ಲಿ ರಾಶಿ ರಾಶಿ ಮೀನುಗಳು,  ಇದು ಅಂತಿಂತ ಮತ್ಸ್ಯ ಸಮೂಹವಲ್ಲ... ದೇವರ ಮೀನುಗಳು! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಇಂಥ ಅಪರೂಪದ ಮೀನುಗಳು ಕಾಣೋದಕ್ಕೆ ಸಿಗುತ್ತವೆ. 

ಈ ಮೀನನ್ನು ಯಾರು ಕೂಡಾ ಹಿಡಿಯೋದಿಲ್ಲ. ಈ ಪುಟ್ಟ ತೊರೆಯ ಪಕ್ಕದಲ್ಲಿ ಭದ್ರಕಾಳಿ ದೇವಾಲಯವಿದ್ದು, ದೇವರಿಗೆ ಸೇರಿದ ಮತ್ಸ್ಯ ರಾಶಿ ಅನ್ನುವ ನಂಬಿಕೆ ಈ ಭಾಗದ ಜನರದ್ದು. ಹೀಗಾಗಿ ಇಂದಿಗೂ ಸಾವಿರಾರು ಮೀನುಗಳು ಈ ಪುಟ್ಟ ತೊರೆಯಲ್ಲಿ ಜೀವಿಸುತ್ತಿವೆ. ಮೀನುಗಳು ಹೆಚ್ಚಿರುವ ಕಾರಣಕ್ಕೆ ಈ ತೊರೆಯನ್ನ ಮೀನುಕೊಲ್ಲಿ ಅಂತ ಕರೆಯಲಾಗುತ್ತದೆ. 

ಕೃಷಿ ಚಟುವಟಿಕೆ ಮುಗಿಸಿ 'ಕೈಲ್' ಹಬ್ಬದ ಸಂಭ್ರಮದಲ್ಲಿ ರೈತಾಪಿ ವರ್ಗ; ಏನೀ ಹಬ್ಬದ ವಿಶೇಷತೆ.?

ಈ ಮೀನುಗಳನ್ನ ಹಿಡಿದರೆ ಅವರ ಜೀವನದಲ್ಲಿ ಸಂಕಷ್ಟ ಎದುರಾಗುತ್ತೆ, ಅನಾಹುತ ಸಂಭವಿಸುತ್ತೆ ಅನ್ನುವ ನಂಬಿಕೆ ಬಹಳ ಹಿಂದಿನಿಂದಲೂ ಇದೆ.  ಹೀಗಾಗಿ ಅದರ ಪಾಡಿಗೆ ಬಿಟ್ಟಿದ್ದಾರೆ. ಅವುಗಳನ್ನ ಮುಟ್ಟೋದಕ್ಕೂ ಈ ಭಾಗದ ಜನ ಭಯಪಡ್ತಾರೆ. ನೀರು ಹೆಚ್ಚಾದಾಗ ಹರಿದು ಹೋಗುವ ಮೀನುಗಳು ಬಳಿಕ ನೀರು ಕಡಿಮೆಯಾಗುತ್ತಿದ್ದಂತೆ ಮರಳಿ ಈ ಸ್ಥಳಕ್ಕೆ ಬಂದು ಸೇರುತ್ತವೆ. ಕೊಡಗಿನ ಮೂವತ್ತೊಕ್ಲು ಮೀನುಕೊಲ್ಲಿಯ ಮೀನುಗಳನ್ನ ಉಳಿಸೋದಕ್ಕಾಗಿ ಗ್ರಾಮಸ್ಥರು ಟೊಂಕ ಕಟ್ಟಿದ್ದಾರೆ.