Karwar: ಆಟವಾಡೋವಾಗ ಸ್ಲೈಡಿಂಗ್‌ ಗೇಟ್‌ ತಲೆಯ ಮೇಲೆ ಬಿದ್ದು ಕಂದಮ್ಮ ಸಾವು!

Karwar: ಆಟವಾಡೋವಾಗ ಸ್ಲೈಡಿಂಗ್‌ ಗೇಟ್‌ ತಲೆಯ ಮೇಲೆ ಬಿದ್ದು ಕಂದಮ್ಮ ಸಾವು!

Published : Dec 05, 2024, 09:30 PM IST

ಕಾರವಾರ ತಾಲೂಕಿನಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕನ ತಲೆಯ ಮೇಲೆ ಸ್ಲೈಡಿಂಗ್ ಗೇಟ್ ಬಿದ್ದು ಮೃತಪಟ್ಟಿದ್ದಾನೆ. ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಘಟನೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರವಾರ (ಡಿ.5): ಮಕ್ಕಳು ಆಟವಾಡೋವಾಗ ಎಷ್ಟು ಎಚ್ಚರಿಕೆಯಿದ್ದರೂ ಸಾಲದು ಅನ್ನೋದಕ್ಕೆ ಉದಾಹರಣೆ ಇದು. ಕಾರವಾರ ತಾಲೂಕಿನ ಬಬ್ರುವಾಡ  ಗ್ರಾ.ಪಂ. ವ್ಯಾಪ್ತಿಯ ಕನಸಿಗದ್ದೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕನ ತಲೆಯ ಮೇಲೆ ಸ್ಲೈಂಡಿಂಗ್‌ ಗೇಟ್‌ ಬಿದ್ದ ದಾರುಣ ಸಾವು ಕಂಡಿದ್ದಾನೆ.

ಆಜಮ್ ಜಾವೇದ್ ಶೇಕ್ ಮೃತಪಟ್ಟ ಬಾಲಕ. ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂದಿನ ಗೇಟ್ ಮುರಿದು ಮಗು ತಲೆಯ ಮೇಲೆ ಬಿದ್ದಿತ್ತು. ಕೂಡಲೇ ಮಗುವನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗುವಿನ ತಲೆಯ ಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿರುವುದರಿಂದ ಬೇರೆ ಆಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದ್ದರು.

Bengaluru: 2160 ಕೋಟಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪಾಲು ಖರೀದಿಸಿದ ಕೆನಡಾ ಕೋಟ್ಯಧಿಪತಿ!

ಮಣಿಪಾಲದ ಆಸ್ಪತ್ರೆಗೆ ತೆರಳುತ್ತಿರುವ ಸಂದರ್ಭ ಮಾರ್ಗ ಮಧ್ಯೆ ಹೊನ್ನಾವರದಲ್ಲಿ ಮಗು ಸಾವು ಕಂಡಿದೆ. ಬಾಲಕನಿಗೆ ಎರಡು ಹಿರಿಯ ಸಹೋದರಿಯರಿದ್ದು, ಈತನೇ  ಚಿಕ್ಕವನಾಗಿದ್ದ. ತಂದೆ ಚಾಲಕ ವೃತ್ತಿ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!