ಬಾಗಲಕೋಟೆ: ವಾಯವ್ಯ ಸಾರಿಗೆಗೆ ಗುಜರಿ ಬಸ್ ಖರೀದಿಸಿದ್ರೆ ಕರವೇಯಿಂದ ಉಗ್ರ ಹೋರಾಟ

ಬಾಗಲಕೋಟೆ: ವಾಯವ್ಯ ಸಾರಿಗೆಗೆ ಗುಜರಿ ಬಸ್ ಖರೀದಿಸಿದ್ರೆ ಕರವೇಯಿಂದ ಉಗ್ರ ಹೋರಾಟ

Published : Jun 05, 2022, 12:26 PM IST

*  ಬಿಎಂಟಿಸಿ ಗುಜರಿ ಬಸ್‌ಗಳ ಖರೀದಿಗೆ ಮುಂದಾದ ವಾಯವ್ಯ ಕ.ರಾ.ಸಾ.ಸಂಸ್ಥೆ
*  50 ಸಾವಿರ- 1 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿರೋ ಬಿಎಂಟಿಸಿ ಸಂಸ್ಥೆ
*  ಸಂಸ್ಥೆ ಕ್ರಮಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ತೀವ್ರ ವಿರೋಧ, ಹೋರಾಟಕ್ಕೆ ನಿರ್ಧಾರ
 

ಬಾಗಲಕೋಟೆ(ಜೂ.05):  ರಾಜ್ಯದಲ್ಲಿ ಆಗಾಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಎಂಬ ಕೂಗು ಕೇಳುತ್ತಲೇ ಬರ್ತಿದೆ, ಆದ್ರೆ ಅದರ ಸಾಲಿಗೆ ಈಗ ಮತ್ತೊಂದು ವಿವಾದ ಶುರುವಾಗಿದೆ. ರಾಜ್ಯದಲ್ಲಿ ಬಿಎಂಟಿಸಿ ಗುಜರಿಗೆ ಹಾಕಲು ಮುಂದಾಗಿರೋ ಸರ್ಕಾರಿ ಬಸ್ಗಳನ್ನ ಇದೀಗ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಖರೀದಿಗೆ ಮುಂದಾಗಿದ್ದು, ಈ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಬಸ್ಗಳು ಓಡಾಡುವ ಜಿಲ್ಲೆಗಳಲ್ಲಿ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. 

ರಾಜ್ಯದಲ್ಲಿ ಹೊಸ ಬಸ್‌ನಲ್ಲಿ ಕುಳಿತು ಸಂಭ್ರಮಿಸಬೇಕಾಗಿದ್ದ ಉತ್ತರ ಕರ್ನಾಟಕದ ಜನರು ಇನ್ನು ಮುಂದೆ ಗುಜರಿ ಅಂದರೆ ಮೋಡಕಾಕ್ಕೆ ಹೋಗುವ ಬಸ್ಸಿನಲ್ಲಿ ಕುಳಿತು ಸರ್ಕಾರಕ್ಕೆ ಹಿಡಿಶಾಪ ಹಾಕಬೇಕಾದ ಅನಿವಾರ್ಯತೆ ಪರಿಸ್ಥಿತಿ ಬಂದರೂ ಬರಬಹುದು. ಹೌದು. ಬೆಂಗಳೂರು ನಗರದಲ್ಲಿ ಬಿಎಂಟಿಸಿ ಓಡಿಸುತ್ತಿದ್ದ ಅಂದಾಜು 25 ಸಾವಿರ ಬಸ್‌ಗಳನ್ನ ಗುಜರಿಗೆ ಹಾಕಲು ನಿರ್ಧರಿಸಿದೆಯಂತೆ. ಈ ಬಸ್‌ಗಳು ಬರೋಬ್ಬರಿ 8ರಿಂದ 9 ಲಕ್ಷ ಕಿಮೀ ಓಡಿದ್ದು, ಇವುಗಳನ್ನ ಬಿಎಂಟಿಸಿ ಗುಜರಿಗೆ ಹಾಕಲು ಮುಂದಾಗಿದೆ. ಇತ್ತ ವಾಯವ್ಯ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆ ಆ ಬಸ್‌ಗಳನ್ನ 50 ಸಾವಿರ ದಿಂದ ಅಂದಾಜು 1 ಲಕ್ಷ ರೂಪಾಯಿವರೆಗೆ ಖರೀದಿ ಮಾಡಲು ಮುಂದಾಗಿದೆ ಎನ್ನಲಾಗುತ್ತಿದ್ದು, ಈ ಸಂಬಂಧ ಅಧಿಕಾರಿಗಳ ಮಟ್ಟದಲ್ಲೂ ಮೊದಲ ಹಂತದ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಚ್ಚರಿಯ ಸಂಗತಿ ಅಂದ್ರೆ ಉತ್ತಮ ರಸ್ತೆಗಳನ್ನ ಹೊಂದಿರೋ ಬೆಂಗಳೂರಿನಂತಹ ಮಹಾನಗರದಲ್ಲಿಯೇ ಸಂಚಾರಕ್ಕೆ ಯೋಗ್ಯವಲ್ಲದ ಬಸ್ಗಳನ್ನ ಇದೀಗ ಖರೀದಿಸಿ, ಉತ್ತರ ಕರ್ನಾಟಕದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ವ್ಯಾಪ್ತಿಯ ಜಿಲ್ಲೆಗಳಲ್ಲಿ ಯಾವ ರೀತಿ ಸಂಚಾರಕ್ಕೆ ಬಿಡುತ್ತೇ ಅನ್ನೋದೆ ಯಕ್ಷಪ್ರಶ್ನೆಯಾಗಿದೆ. ಆದ್ರೆ ಗುಜರಿ ಬಸ್ಗಳನ್ನ ಖರೀದಿಸಲು ಮುಂದಾಗಲು ಅಧಿಕಾರಿಗಳು ಮೊದಲ ಹಂತದಲ್ಲಿ ಮಾತುಕತೆ ನಡೆಸಿರೋದು ಈ ಭಾಗದ ಕನ್ನಡಪರ ಸಂಘಟನೆಗಳ ಹೋರಾಟಗಾರರಲ್ಲಿ ತೀವ್ರ ಆಕ್ರೋಶ ಜ್ವಾಲೆಯನ್ನ ಹುಟ್ಟಿಸುವಂತೆ ಮಾಡಿದೆ. 

India@75: ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿದ ದಿಟ್ಟೆ ಅಸ್ಸಾಂನ ಭೋಗೇಶ್ವರಿ

ಇನ್ನು ಗುಜರಿ ಬಸ್ಗಳನ್ನ ಖರೀದಿಸಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆ ಸೇರಿದಂತೆ ಕಿತ್ತೂರು ಕರ್ನಾಟಕದ 7 ಜಿಲ್ಲೆಗಳಲ್ಲಿ ಇಂತಹ ಬಸ್ಗಳನ್ನ ಓಡಾಟಕ್ಕೆ ಬಿಡಲು ಮುಂದಾಗಿರೋದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಈಗಾಗಲೇ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಗುಜರಿ ಬಸ್ಗಳನ್ನ ಖರೀದಿಸದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದು, ಇದರ ಬೆನ್ನಲ್ಲೆ ಬಾಗಲಕೋಟೆಯಲ್ಲಿ ಕನ್ನಡಪರ ಸಂಘಟನೆಗಳು ಸಭೆ ಸೇರಿ ಸಾರಿಗೆ ಸಂಸ್ಥೆಗಳ ಅಧಿಕಾರಿಗಳ ನಿಲುವನ್ನು ಖಂಡಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಾರಿಗೆ ಸಚಿವರು ಗುಜರಿ ಬಸ್ನಲ್ಲಿಯೇ ಕುಳಿತು ಮೊದಲು ಓಡಾಡಲಿ ಆನಂತರ ಯೋಗ್ಯವೆನಿಸಿದರೆ ಜನರ ಸಂಚಾರಕ್ಕೆ ಬಿಡಲಿ, ಒಂದೊಮ್ಮೆ ಗುಜರಿ ಬಸ್ಗಳನ್ನ ಖರೀದಿಸಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಓಡಾಡಲು ಬಿಟ್ಟಲ್ಲಿ, ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಇನ್ನೂ ಸಹ ಅಧಿಕಾರಿಗಳ ಮಾತುಕತೆ ಹಂತದಲ್ಲಿರೋ ಬಿಎಂಟಿಸಿ ಗುಜರಿ ಬಸ್ಗಳ ಖರೀದಿ ವಿಚಾರವನ್ನು ಸರ್ಕಾರ ಕೈಬಿಡಬೇಕಿದೆ. ಇದು ಆಗದೇ ಹೋದಲ್ಲಿ ಕನ್ನಡಪರ ಸಂಘಟನೆಗಳಿಂದ ಹೋರಾಟ ಮಾತ್ರ ತಪ್ಪಿದ್ದಲ್ಲ. ಇಷ್ಟಕ್ಕೂ ತಮ್ಮ ತವರೂರಿನಲ್ಲಿಯೇ ಗುಜರಿಯಂತಹ ಬಸ್ಗಳನ್ನ ಓಡಿಸಿ  ಸಿಎಂ ಬೊಮ್ಮಾಯಿ ಕಂಟಕವಾಗ್ತಾರಾ ಅಥವಾ ಹೊಸ ಬಸ್‌ಗಳ ಖರೀದಿಗೆ ಅನುಮತಿ ನೀಡಿ ವಿವಾದಕ್ಕೆ ತೆರೆ ಎಳೆಯುತ್ತಾರಾ ಅಂತ ಕಾದು ನೋಡಬೇಕಿದೆ.
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more