Jul 27, 2021, 2:45 PM IST
ಬೆಳಗಾವಿ/ಅಥಣಿ (ಜು.27): ಅಥಣಿ ತಾಲೂಕಿನ ಸತ್ತಿ ಗ್ರಾಮಕ್ಕೂ ಜಲಕಂಟಕ ಎದುರಾಗಿದೆ. ಸತ್ತಿ ಗ್ರಾಮ ಭಾಗಶಃ ಜಲಾವೃತವಾಗಿದೆ. 100ಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದು, ದೇಗುಲ, ದರ್ಗಾ, ಶಾಲೆಗಳು ಮುಳುಗಿವೆ. ಗ್ರಾಮದ ಚಾಮುಂಡೇಶ್ವರಿ ದೇಗುಲ ಬುಡಾನ್‌ಸಾಬ್ ದರ್ಗಾ ಜಲಾವೃತವಾಗಿದೆ.
ಕೃಷ್ಣಾನದಿ ತೀರದ ಗ್ರಾಮಸ್ಥರ ಪರದಾಟ : ಪ್ರವಾಹಕ್ಕೆ ಬದುಕು ಬೀದಿಪಾಲು
ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಸಂತ್ರಸ್ತರು ತೆರಳಿದ್ದಾರೆ. ಗ್ರಾಮದ ಉಳಿದ ಜನರಲ್ಲೂ ತೀವ್ರ ಆತಂಕ ಮನೆ ಮಾಡಿದೆ.