ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನ್ನದಾತರಿಗೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದಲ್ಲಿ ‘ರೈತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನ್ನದಾತರಿಗೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದಲ್ಲಿ ‘ರೈತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರೈತ ರತ್ನ ಪ್ರಶಸ್ತಿಯ ಮೂರನೇ ಆವೃತ್ತಿ ಇದಾಗಿದ್ದು, ಎಂದಿನಂತೆ ಈ ಬಾರಿಯೂ 11 ವಿಭಾಗದಲ್ಲಿ 12 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.ರೈತರತ್ನ ಪ್ರಶಸ್ತಿಗಾಗಿ 600 ಕ್ಕೂ ಹೆಚ್ಚು ರೈತರು ಹೆಸರುಗಳನ್ನು ಕಳಿಸಿದ್ದು, ಅದರಲ್ಲಿ 12 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಸ್ಥಿರ ರೈತ ವಿಭಾಗ,ಸಾವಯವ ರೈತ,ಆಧುನಿಕ ರೈತ,ಯುವ ರೈತ,ರೈತ ಮಹಿಳೆ,ಪಶು ಸಂಗೋಪನೆ,ತೋಟಗಾರಿಕೆ,ವೈದ್ಯ/ವಿಜ್ಞಾನಿ ರೈತ,ಕೃಷ್ಯುತ್ಪನ್ನ ಸಂಸ್ಥೆ/ರೈತ ಸೇರಿದಂತೆ ಕೃಷಿ ತಂತ್ರಜ್ಞಾನಿ/ಸಂಶೋಧಕ ರೈತ ವಿಭಾಗಕ್ಕೆ ಸಾಧಕರನ್ನು ಗೌರವಿಸಲಾಗಿದೆ.