- ಕಲಬುರಗಿಯಲ್ಲಿ ಅರ್ಥಪೂರ್ಣ ನಾಗರ ಪಂಚಮಿ ಆಚರಣೆ
- ಹುತ್ತಕ್ಕೆ ಹಾಲೆರೆಯುವ ಬದಲು ಬಡ ಮಕ್ಕಳಿಗೆ ಹಾಲು ಖರ್ಜೂರ ವಿತರಣೆ
- ಆರ್ಟ್ ಥೇಟರ್, ಸಂಸ್ಕಾರ ಪ್ರತಿಷ್ಠಾನ ವತಿಯಿಂದ ಅರ್ಥಪೂರ್ಣ ನಾಗ ಪಂಚಮಿ ಆಚರಣೆ
ಕಲಬುರಗಿ (ಆ.14): ನಾಗರ ಪಂಚಮಿ ಹಬ್ಬವನ್ನು ಇಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಹುತ್ತಕ್ಕೆ ಹಾಲೆರೆಯುವ ಬದಲು ಆರ್ಟ್ ಥೇಟರ್, ಸಂಸ್ಕಾರ ಪ್ರತಿಷ್ಠಾನ ವತಿಯಿಂದ ಬಡ ಮಕ್ಕಳಿಗೆ ಹಾಲು ಖರ್ಜೂರ ವಿತರಣೆ ಮಾಡಲಾಯಿತು. ಕಲಬುರಗಿಯ ಕಣ್ಣಿ ಮಾರ್ಕೆಟ್ ಬಳಿ ಗುಡಿಸಲ್ಲಿರುವ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ಖರ್ಜುರ ವಿತರಣೆ ಮಾಡಲಾಯಿತು.