International Women's Day : ಪುರುಷರಿಗೆ ಮಹಿಳೆಯರೇ ಸ್ಫೂರ್ತಿ, ಅವರಿಂದಲೇ ಜೀವನ ಪೂರ್ತಿ

International Women's Day : ಪುರುಷರಿಗೆ ಮಹಿಳೆಯರೇ ಸ್ಫೂರ್ತಿ, ಅವರಿಂದಲೇ ಜೀವನ ಪೂರ್ತಿ

Published : Mar 08, 2022, 09:53 PM IST

* ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ
* ಪುರುಷರಿಗೆ ಮಹಿಳೆಯರೇ ಸ್ಪೂರ್ತಿ, ಅವರಿಂದಲೇ ನಾವು :ಅಚ್ಚುತ್ ಗೌಡ
* ಫಿಡಿಲಿಟಿಸ್ ಸಂಸ್ಥೆಯ  ಮಹಿಳೆಯರಿಗೆ ವಿಶೇಷ ಸ್ವಾಗತ
* ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತ ಅಲ್ಲ 

ಬೆಂಗಳೂರು (ಮಾ. 08)  ಮಹಿಳೆ (Woman) ಸಮಾಜದ ಶಕ್ತಿ, ಕುಟುಂಬದ ಕಣ್ಮು, ಸಮಾಜ ಮತ್ತು ರಾಷ್ಟ್ರ(Nation) ನಿರ್ಮಾಣದಲ್ಲಿ ಮಹಿಳ ವುಮುಖ ಪಾತ್ರ ವಹಿಸಿದ್ಯಾಳ ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮಹಿಳೆ ತಾನು ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾಳ ಗಡಿ ಕಾಯುವುದ್ರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶಕ್ತಿ, ತಾಳ್ಮೆ, ಉತ್ಸಾಹ, ಧೈರ್ಯ ಮಹಿಳಗಿದೆ. ಪುರುಷರ ಸಮಾನವಾಗಿ ನಿಂತಿರುವ ಮಹಿಳೆಯರು ಅನೇಕ ಉನ್ನತ ಹುದ್ದೆಗಳನ್ನು ಸಂಭಾಳಿಸುತ್ತಿದ್ದಾರೆ. ಇನ್ನು ಈ ಬಾರಿ ವಿಶ್ವ ಸಂಸ್ಥೆ(UN) 2022 ವಿಶ್ವ ಮಹಿಳಾ ದಿನಾಚರಣೆಯ ಅನುಮೋದನೆಗೊಳಿಸಿರುವ “ಇಂದಿನ ಲಿಂಗ ಸಮಾನತೆಯೇ ನಾಳಿನ ಸುಸ್ಥಿರತೆ” ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ.

ಬನಶಂಕರಿಯ ಫಿಡಿಲಿಟಿಸ್ (Fidelitus) ಸಂಸ್ಥೆಯ ಪುರುಷರು ಮಹಿಳೆಯರನ್ನ ಕಚೇರಿಯೊಳಗೆ ವಿಭಿನ್ನವಾಗಿ ಸ್ವಾಗತಿಸಿದರು. ಇನ್ನು ಪ್ರತಿಯೊಬ್ಬ ಮಹಿಳಾ ಉದ್ಯೋಗೊಗಳನ್ನು ಕುದುರೆ ಸಾರೋಟಿನ ಮೂಲಕ ಸ್ವಾಗತಿಸಿ, ಮಹಿಳೆಯರು ಪಲ್ಲಕ್ಕಿಯ ಮೇಲೆ ಕುಳಿತು ಆಗಮಿಸುತ್ತಿದ್ದಂತೆ ಪುರುಷರು ಡೋಲು ಬಾರಿಸಿ, ಕುಣಿದು ಕುಪ್ಪಳಿಸಿ ಮಹಿಳೆಯರನ್ನ ಕಛೇರಿಗೆ ಬರ ಮಾಡಿಕೊಂಡರು. ಇನ್ನು ಸಂಸ್ಥೆಯ ಮಹಿಳೆಯರು ಶ್ವೇತ ವರ್ಣದ ಉಡುಪುಗಳಲ್ಲಿ ಕಂಗೊಳಿಸಿದ್ದು, ಅವರಿಗಾಗಿಯೇ ರ್ಯಾಂಪ ವಾಕ ಆಯೋ ಜಿಸಲಾಗಿತ್ತು. ರ್ಯಾಂಪ್ ಮೇಲೆ ಮಹಿಳೆಯರು ಹೆಜ್ಜೆ ಹಾಕಿ, ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸಿದರು.

ಪೊಲೀಸ್ ಠಾಣೆಯಲ್ಲಿ ವಿಶ್ವ ಮಹಿಳಾ ದಿನ

ಈ ವೇಳೆ ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಅಚ್ಚುತ್ ಗೌಡ ಮಾತನಾಡಿ, ಪುರುಷರಿಗೆ ಮಹಿಳೆಯರೇ ಸ್ಫೂರ್ತಿ, ಅವರಿಂದಲೇ ನಾವು. ಮಹಿಳೆಯರು ತಮ್ಮ ಜೀವನದಲ್ಲಿ ಅನೇಕ ಪಾತ್ರಗಳನ್ನ ನಿಭಾಯಿಸುತ್ತಾರೆ. ಆ ಎಲ್ಲಾ ಪಾತ್ರಗಳನ್ನ ಅವರು ಅಚ್ಚುಕಟ್ಟಾಗಿ ನಿರ್ವಸುತ್ತಾರೆ. ಈ ಒಂದು ದಿನಕ್ಕೆ ಮಾತ್ರ ಮಹಿಳಾ ದಿನಾಚರಣೆಯನ್ನ ಮೀಸಲಿಡಬಾರದು, ಪ್ರತಿನಿತ್ಯ ಅವರ ದಿನವನ್ನ ಸಂಭ್ರಮಿಸಬೇಕು. ನಾನು ಕೂಡ ಈ ಮಟ್ಟಕ್ಕೆ ಬೆಳೆಯಲು ನನ್ನ ಜೀವನದಲ್ಲಿರುವ ನನ್ನ ತಾಯಿ, ನನ್ನ ಮಡದಿ ಹಾಗೂ ನನ್ನ ಮಗಳು ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ ಎಂದು ಹೇಳಿದರು. 

 

 

 

 

 


 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more