ಮೆಟ್ರೋ ಪಿಲ್ಲರ್ ದುರಂತಕ್ಕೆ 18 ಅಡಿ ಎತ್ತರ ಕಂಬಿ ಕಟ್ಟಿರೋದೇ ಕಾರಣ?: IISC ಪ್ರೊಫೆಸರ್ ಹೇಳಿದ್ದೇನು?

ಮೆಟ್ರೋ ಪಿಲ್ಲರ್ ದುರಂತಕ್ಕೆ 18 ಅಡಿ ಎತ್ತರ ಕಂಬಿ ಕಟ್ಟಿರೋದೇ ಕಾರಣ?: IISC ಪ್ರೊಫೆಸರ್ ಹೇಳಿದ್ದೇನು?

Published : Jan 17, 2023, 02:13 PM ISTUpdated : Jan 17, 2023, 02:19 PM IST

ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಹಾಗೂ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 80% ತನಿಖೆ ಮುಗಿಸಿದ್ದೇವೆ ಎಂದು IISC ಪ್ರೊಫೆಸರ್ ಚಂದ್ರ ಕಿಶನ್ ಹೇಳಿದ್ದಾರೆ.
 

ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಮಗಾರಿಗೆ ಯಾವ ಕಂಬಿ ಬಳಕೆ ಮಾಡಲಾಗಿದೆ. ಅದ್ರ ಕ್ವಾಲಿಟಿ ಸರ್ಟಿಫಿಕೇಟ್'ನ್ನು ತರಿಸಿಕೊಂಡಿದ್ದೇವೆ ಎಂದು ಚಂದ್ರ ಕಿಶನ್ ಹೇಳಿದರು. ಅದರ ಜೊತೆಗೆ ಜಲ್ಲಿ, ಮಣ್ಣು ಹಾಗೂ ಸಿಮೆಂಟ್'ಗಳ ಟೆಸ್ಟಿಂಗ್ ರಿಪೋರ್ಟ್ ಪಡೆದಿದ್ದೇವೆ. ಸಧ್ಯ ಮೇಲ್ನೋಟಕ್ಕೆ ಕಂಟ್ರಾಕ್ಟರ್'ಗಳೇ ನೇರ ಹೊಣೆಯಾಗಿದ್ದಾರೆ ಎಂದರು. ಈ ಪಿಲ್ಲರ್ ನಿರ್ಮಾಣದ ವೇಳೆ 18 ಮೀಟರ್ ಎತ್ತರದ ಕಂಬಿ ಕಟ್ಟಿದ್ದಾರೆ. ಈ ಎತ್ತರದಲ್ಲಿ 6 ಫ್ಲೋರ್ ಮನೆ ಕಟ್ಟಬಹುದು. ಇಷ್ಟು ಎತ್ತರದ ಪಿಲ್ಲರ್'ಗೆ ಕಂಬಿ  ಕಟ್ಟಿದಾಗ ಯಾವ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಿದ್ದಾರೆ?. ಮುಂಜಾಗ್ರತಾ ಕ್ರಮವಾಗಿ ಕಂಬಿಯ ಪಿಲ್ಲರ್'ಗೆ ಸಪೋರ್ಟ್ ನೀಡಬೇಕಿತ್ತು, ಅದನ್ನು ನೀಡಿಲ್ಲ ಅನ್ನೋದು ಇದ್ರಿಂದ ಗೊತ್ತಾಗುತ್ತಿದೆ. ಆದ್ರೆ ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. 100% ವರದಿ ಮುಗಿದ ಬಳಿಕವೇ ಕಾರಣ ಯಾರು ಅನ್ನೋದು ಗೊತ್ತಾಗುತ್ತೆ ಎಂದರು. ಕೆಲಸಗಾರರು ಕಂಬಿಯ ಪಿಲ್ಲರ್'ನ್ನೇ ನೇರವಾಗಿ ನಿಲ್ಲಿಸಲು ಸುತ್ತಲು ಸಪೋರ್ಟ್ ನೀಡಬೇಕಿತ್ತು. ಅದು ಕೆಲಸಗಾರರಿಗೆ ಗೊತ್ತಾಗಲ್ಲ, ಕಂಟ್ರಾಕ್ಟರ್ ಹಾಗೂ ಇಂಜಿನಿಯರ್'ಗಳೇ ಅದನ್ನ ನೋಡಿಕೊಳ್ಳಬೇಕು. ಸಧ್ಯ ಕಂಟ್ರಾಕ್ಟರ್ ಹಾಗೂ ಇಂಜಿನಿಯರ್'ಗಳೇ ನೇರ ಹೊಣೆಯಾಗಲಿದ್ದಾರೆ ಎಂದರು.

 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more